ಆರಂಭವಾಯ್ತು ರೋಗಗಳ ಹಾವಳಿ : ಡೆಂಗ್ಯೂಗೆ ಬಾಲಕ ಬಲಿ

Boy with dengue symptoms dies
Highlights

ಮುಂಗಾರು ಆರಂಭವಾಗುತ್ತಿದ್ದಂತೆ ರೋಗಗಳ ಹಾವಳಿಯೂ ಕೂಡ ಆರಂಭವಾಗುತ್ತದೆ.  ಡೆಂಗ್ಯೂ ಜ್ವರದಿಂದ ಹಾವೇರಿ ಜಿಲ್ಲೆಯಲ್ಲಿ  ಬಾಲಕನೋರ್ವ ಸಾವಿಗೀಡಾಗಿದ್ದಾರೆ. 

ಹಾವೇರಿ : ಮುಂಗಾರು ಆರಂಭವಾಗುತ್ತಿದ್ದಂತೆ ರೋಗಗಳ ಹಾವಳಿಯೂ ಕೂಡ ಆರಂಭವಾಗುತ್ತದೆ.  ಡೆಂಗ್ಯೂ ಜ್ವರದಿಂದ ಹಾವೇರಿ ಜಿಲ್ಲೆಯಲ್ಲಿ  ಬಾಲಕನೋರ್ವ ಸಾವಿಗೀಡಾಗಿದ್ದಾರೆ. 

ಸವಣೂರ ತಾಲೂಕಿನ ಮಣ್ಣೂರ ಗ್ರಾಮದ ರಾಘು ಯಲ್ಲಪ್ಪ ಸಾತಣ್ಣವರ(13) ಎಂಬ ಬಾಲಕ  ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾನೆ. ಕಳೆದ 12 ದಿನದಿಂದ ಬಿಟ್ಟೂ ಬಿಡದೆ  ಜ್ವರ ಬಾಧಿಸುತ್ತಿದ್ದು,  ಬಂಕಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. 

ನಿನ್ನೆ ಮತ್ತೆ ಜ್ವರ ಉಲ್ಬಣಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದರೂ ಕೂಡ ಜ್ವರ ನಿಯಂತ್ರಣಕ್ಕೆ ಬಾರದೆ ನಿನ್ನೆ ರಾತ್ರಿ ಬಾಲಕ ಅಸು ನೀಗಿದ್ದಾನೆ.

loader