ಚೀನಾದ ಚಾಂಕಿಂಗ್ ಎಂಬಲ್ಲಿನ ಅಪಾರ್ಟ್‌ಮೆಂಟ್’ನಲ್ಲಿ ಯುವಕನೊಬ್ಬ ಲಿಫ್ಟ್‌ನಲ್ಲಿನ ಸ್ವಿಚ್‌ಗಳ ಮೇಲೆ ಉಚ್ಚೆ ಹೊಯ್ದ ಪ್ರಸಂಗ ನಡೆದಿದೆ. ಈತ ಯಾ ಪಾಟಿ ಉಚ್ಚೆ ಹೊಯ್ದ ಎಂದರೆ ಸ್ವಿಚ್‌ಗಳಲ್ಲಿ ನೀರು ಹೊಕ್ಕು ತಕ್ಷಣವೇ ಲಿಫ್ಟ್ ಕೆಟ್ಟುಹೋಗಿದೆ.

ಬೀಜಿಂಗ್ : ಚೀನಾದ ಚಾಂಕಿಂಗ್ ಎಂಬಲ್ಲಿನ ಅಪಾರ್ಟ್‌ಮೆಂಟ್’ನಲ್ಲಿ ಯುವಕನೊಬ್ಬ ಲಿಫ್ಟ್‌ನಲ್ಲಿನ ಸ್ವಿಚ್‌ಗಳ ಮೇಲೆ ಉಚ್ಚೆ ಹೊಯ್ದ ಪ್ರಸಂಗ ನಡೆದಿದೆ. ಈತ ಯಾ ಪಾಟಿ ಉಚ್ಚೆ ಹೊಯ್ದ ಎಂದರೆ ಸ್ವಿಚ್‌ಗಳಲ್ಲಿ ನೀರು ಹೊಕ್ಕು ತಕ್ಷಣವೇ ಲಿಫ್ಟ್ ಕೆಟ್ಟುಹೋಗಿದೆ.

ಆಗ ಲಿಫ್ಟ್ ಬಾಗಿಲು ತೆರೆಯದೇ ಈತ ಒದ್ದಾಡಿದ್ದಾನೆ. ಕೊನೆಗೆ ಸೈರನ್ ಮೊಳಗಿ, ತಾಂತ್ರಿಕ ಸಿಬ್ಬಂದಿ ಬಂದು ಲಿಫ್ಟ್ ಬಾಗಿಲು ತೆರೆದು ಈತನನ್ನು ರಕ್ಷಿಸಿದ್ದಾರೆ. ಇಂಥ ಕೃತ್ಯ ಎಸಗಿದ್ದಕ್ಕೆ ಈತನಿಗೆ ತಕ್ಕ ಶಾಸ್ತಿ ಆಯ್ತು ಬಿಡು ಎಂದು ನಿವಾಸಿಗಳು ಹಿಡಿಶಾಪ ಹಾಕಿದ್ದಾರೆ. ಇಡೀ ಘಟನೆ ಸಿಸಿಟೀವಿಯಲ್ಲಿ ಸೆರೆಯಾಗಿದೆ.