ಬಿಳಿಚೋಡು ಗ್ರಾಮದಲ್ಲಿ  ಹಾರಿಸ್ ಖಾನ್ ಕಣ್ವಕುಪ್ಪೆ ಗವಿಮಠದಲ್ಲಿ ಯಾರು ಇಲ್ಲದ ವೇಳೆ ಸ್ವಾಮೀಜಿ ಕೂರುವ ಆಸನದ ಮೇಲೆ ಕೂತು ಸೆಲ್ಫಿ ತೆಗೆದುಕೊಂಡಿದ್ದಾನೆ. ಅಲ್ಲದೇ ಈ ಫೋಟೋವನ್ನು ಫೇಸ್​ಬುಕ್​ನಲ್ಲಿ ಅಪಲೋಡ್ ಮಾಡಿ ಉದ್ಧಟತನ ಮೆರೆದಿದ್ದಾನೆ. ಸ್ಟೇಟಸ್​​'ನಲ್ಲಿ ಆಯುಧಗಳು ಶೋಕಿಗಾಗಿ ಅಷ್ಟೇ, ಹೆದರಿಸಲು ನನ್ನ ಹೆಸರು ಸಾಕು ಎಂದು ಬರೆದುಕೊಂಡಿದ್ದಾನೆ.

ದಾವಣಗೆರೆ(ಅ.27): ದಾವಣಗೆರೆ ಜಗಳೂರು ತಾಲೂಕಿನ​ ಕಣ್ವಕುಪ್ಪೆ ಗವಿಮಠದಲ್ಲಿ ಯುವಕನೊಬ್ಬ ಸ್ವಾಮೀಜಿ ಕುಳಿತುಕೊಳ್ಳುವ ಆಸನದ ಮೇಲೆ ಕೂತು ಉದ್ದಟತನ ಮೆರೆದಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಳಿಚೋಡು ಗ್ರಾಮದಲ್ಲಿ ಹಾರಿಸ್ ಖಾನ್ ಕಣ್ವಕುಪ್ಪೆ ಗವಿಮಠದಲ್ಲಿ ಯಾರು ಇಲ್ಲದ ವೇಳೆ ಸ್ವಾಮೀಜಿ ಕೂರುವ ಆಸನದ ಮೇಲೆ ಕೂತು ಸೆಲ್ಫಿ ತೆಗೆದುಕೊಂಡಿದ್ದಾನೆ. ಅಲ್ಲದೇ ಈ ಫೋಟೋವನ್ನು ಫೇಸ್​ಬುಕ್​ನಲ್ಲಿ ಅಪಲೋಡ್ ಮಾಡಿ ಉದ್ಧಟತನ ಮೆರೆದಿದ್ದಾನೆ. ಸ್ಟೇಟಸ್​​'ನಲ್ಲಿ ಆಯುಧಗಳು ಶೋಕಿಗಾಗಿ ಅಷ್ಟೇ, ಹೆದರಿಸಲು ನನ್ನ ಹೆಸರು ಸಾಕು ಎಂದು ಬರೆದುಕೊಂಡಿದ್ದಾನೆ.

ನಾಲ್ವಡಿ ಶಾಂತಲಿಂಗ ಸ್ವಾಮೀಜಿಗಳು ಉತ್ತರಾಖಖಂಡ್​ನ ಕೇದಾರನಾಥ ಕ್ಷೇತ್ರಕ್ಕೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ಆಕ್ರೋಶಗೊಂಡ ಭಕ್ತರು ಹಾರಿಸ್ ಖಾನ್​​ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಗೊಂಡ ಹಾರಿಸ್ ಖಾನ್ ಜಗಳೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆಗೆ ಜಗಳೂರು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಡಿಸಿದ್ದು ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಗಳೂರು ಪಟ್ಟಣ ಇದೀಗ ಬೂದಿಮುಚ್ಚಿದ ಕೆಂಡದಂತಿದ್ದು ಬಿಗಿಪೊಲೀಸ್ ಬಂದೋಬಸ್ತ್ ಹಾಕಲಾಗಿದೆ