‘ಮೊದ ಮೊದಲು ಸುಲಭದ ಆಟ ಕೊಟ್ಟಿದ್ದರು. ಅದೇನು ಕಷ್ಟದ್ದಾಗಿರಲಿಲ್ಲ. ಆದರೆ ಬರಬರುತ್ತಾ ಆಟ ಹೆದರಿಕೆ ಹುಟ್ಟಿಸತೊಡಗಿತ್ತು. 9 ನೇ ಲೆವೆಲ್ ತಲುಪಿದ ವೇಳೆ ನನಗೆ ಕೈ ಮೇಲೆ ಬ್ಲೂವೇಲ್ ಚಿತ್ರ ಕೆತ್ತಿಕೊಳ್ಳುವ ಚಾಲೆಂಜ್ ನೀಡಲಾಗಿತ್ತು. ನಾನು ಅದನ್ನೂ ಯಶಸ್ವಿಯಾಗಿದ್ದೆ ಆಡಿದ್ದೆ’.... ಕೋಲ್ಕತಾದ ಹೂಗ್ಲಿಯ 10ನೇ ತರಗತಿಯ ಬಾಲಕ ಅರ್ಘ ಭಟ್ಟಾಚಾರ್ಯ ಸಣ್ಣಗೆ ಕಂಪಿಸುವ ಧ್ವನಿಯಲ್ಲಿ ಇಂಥದ್ದೊಂದು ಕಥೆ ಹೇಳುತ್ತಾ ಹೋಗುತ್ತಿದ್ದರೆ, ಪಕ್ಕದಲ್ಲಿದ್ದ ಆತನ ಪೋಷಕರು, ಶಿಕ್ಷಕರು ಅಷ್ಟೇ ಏಕೆ, ಪೊಲೀಸರೂ ಸಣ್ಣದಾಗಿ ಬೆವತಿದ್ದರು.
ಕೋಲ್ಕತ್ತಾ(ಸೆ.03): ‘ಮೊದ ಮೊದಲು ಸುಲಭದ ಆಟ ಕೊಟ್ಟಿದ್ದರು. ಅದೇನು ಕಷ್ಟದ್ದಾಗಿರಲಿಲ್ಲ. ಆದರೆ ಬರಬರುತ್ತಾ ಆಟ ಹೆದರಿಕೆ ಹುಟ್ಟಿಸತೊಡಗಿತ್ತು. 9 ನೇ ಲೆವೆಲ್ ತಲುಪಿದ ವೇಳೆ ನನಗೆ ಕೈ ಮೇಲೆ ಬ್ಲೂವೇಲ್ ಚಿತ್ರ ಕೆತ್ತಿಕೊಳ್ಳುವ ಚಾಲೆಂಜ್ ನೀಡಲಾಗಿತ್ತು. ನಾನು ಅದನ್ನೂ ಯಶಸ್ವಿಯಾಗಿದ್ದೆ ಆಡಿದ್ದೆ’.... ಕೋಲ್ಕತಾದ ಹೂಗ್ಲಿಯ 10ನೇ ತರಗತಿಯ ಬಾಲಕ ಅರ್ಘ ಭಟ್ಟಾಚಾರ್ಯ ಸಣ್ಣಗೆ ಕಂಪಿಸುವ ಧ್ವನಿಯಲ್ಲಿ ಇಂಥದ್ದೊಂದು ಕಥೆ ಹೇಳುತ್ತಾ ಹೋಗುತ್ತಿದ್ದರೆ, ಪಕ್ಕದಲ್ಲಿದ್ದ ಆತನ ಪೋಷಕರು, ಶಿಕ್ಷಕರು ಅಷ್ಟೇ ಏಕೆ, ಪೊಲೀಸರೂ ಸಣ್ಣದಾಗಿ ಬೆವತಿದ್ದರು.
ನಿಜ. ಬ್ಲೂವೇಲ್ ಜಾಲಕ್ಕೆ ಸಿಕ್ಕಿ, ಕಡೆಗೆ ಶಿಕ್ಷಕರ ಸಮಯಪ್ರಜ್ಞೆ ಯಿಂದಾಗಿ ಬಚಾವ್ ಆದ ಕೋಲ್ಕತಾದ ಮಹೇಶ್ ಶ್ರೀ ರಾಮಕೃಷ್ಣ ಆಶ್ರಮ ವಿದ್ಯಾಲಯದ ಅರ್ಘ ‘ಟ್ಟಾಚಾರ್ಯ ಎಂಬ ಬಾಲಕನ ಕಥೆ ಇದು. ಕಥೆ ಬಿಚ್ಚಿಟ್ಟ ಅರ್ಘ:
10ನೇ ತರಗತಿಯ ಜಾಣ ವಿದ್ಯಾರ್ಥಿಗಳ ಪೈಕಿ ಒಬ್ಬನಾದ ಅರ್ಘನ ಕೈಯಲ್ಲಿ ಇತ್ತೀಚೆಗೆ ಏನೋ ಗಾಯವಾಗಿದ್ದು ಶಾಲೆಯ ಶಿಕ್ಷಕರಿಗೆ ಕಂಡುಬಂದಿತ್ತು. ಈ ಬಗ್ಗೆ ಆತನಲ್ಲಿ ವಿಚಾರಿಸಿ ದಾಗ ಮೊದಲಿಗೆ ಆತ ಬಾಯಿಬಿಡಲಿಲ್ಲ. ಆದರೆ ಶಿಕ್ಷಕರು ಸ್ವಲ್ಪ ಗದರಿದಾಗ, ತಾನು ಬ್ಲೂವೇಲ್ ಆಟ ಆಡುತ್ತಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಈ ವೇಳೆ ಶಿಕ್ಷಕರು ಆತನ ಪೋಷಕರು ಮತ್ತು ಪೊಲೀಸರಿಗೆ ಮಾಹಿತಿ ನೀಡಿ, ಬಾಲಕನನ್ನು ಬ್ಲೂವೇಲ್ ಜಾಲದಿಂದ ಬಚಾವ್ ಮಾಡಿದ್ದಾರೆ.
ವಿಚಾರಣೆ ವೇಳೆ ಅರ್ಘ ತನ್ನ ಬ್ಲೂವೇಲ್ ಕಥೆಯನ್ನು ಹೀಗೆ ಬಿಚ್ಚಿಟ್ಟಿದ್ದಾನೆ. ‘ಕಳೆದ 20 ದಿನಗಳಿಂದ ನಾನು ಬ್ಲೂವೇಲ್ ಆಟ ಆಡುತ್ತಿದ್ದೆ. ಮನೆಯಲ್ಲಿ ಆಡಿದರೆ ಗೊತ್ತಾಗುತ್ತದೆ ಅನ್ನುವ ಕಾರಣಕ್ಕೆ ಮನೆಯ ಬಳಿ ಇರುವ ಸೈಬರ್ ಕೆಫೆಯಲ್ಲಿ ಆಟ ಆಡುತ್ತಿದ್ದೆ. ಮೊದಮೊದಲು ಸುಲ‘ವಾದ ಚಾಲೆಂಜ್ ನೀಡಲಾಗುತ್ತಿತ್ತು. ಅಂದರೆ ಕೈಯಿಂದ ಮೂಗು ಮುಟ್ಟುವುದು, ಪೇಪರ್'ನಲ್ಲಿ ವಿಮಾನ ಮಾಡುವುದು ಮೊದಲಾದ ಚಾಲೆಂಜ್ ನೀಡಲಾಗಿತ್ತು.
ಆದರೆ 9ನೇ ಹಂತಕ್ಕೆ ಬಂದ ವೇಳೆ ನನಗೆ ಕೈ ಮೇಲೆ ಬ್ಲೂವೇಲ್ ಚಿತ್ರ ಕೆತ್ತಿಕೊಳ್ಳುವ ಚಾಲೆಂಜ್ ನೀಡಲಾಗಿತ್ತು. ಈ ವೇಳೆ ನಾನು ಜಿಯೋಮೆಟ್ರಿ ಬಾಕ್ಸ್‌ನಲ್ಲಿ ಇರುವ ಕಂಪಾಸ್‌ನ ಮೂಲಕ ಕೈ ಮೇಲೆ ಬ್ಲೂವೇಲ್ ಚಿತ್ರ ಕೆತ್ತಿಕೊಂಡಿದ್ದೆ. ಬಳಿಕ ಮತ್ತೊಂದು ಹಂತ ಪೂರೈಸಿ 11 ನೇ ಹಂತ ತಲುಪಿದ್ದೆ. ಅಷ್ಟರಲ್ಲಿ....’ ಎಂದ ಅರ್ಘ ಪೊಲೀಸರು, ಪೋಷಕರ ಮುಂದೆ ಬಾಯಿಬಿಟ್ಟಿದ್ದಾನೆ.
