ಅರಿಜೋನಾದ ಈ ಯುವತಿಯ ಜೀವವನಗಾಥೆಯನ್ನು ಕೇಳಲೇಬೇಕು. ಲೈಸನ್ಸ್ ಪಡೆದುಕೊಂಡ ಅಮೆರಿಕದ ಮೊಟ್ಟ ಮೊದಲ ಫೈಲಟ್ ಎಂಬ ಶ್ರೇಯಕ್ಕೆ  ಈಕೆ ಪಾತ್ರವಾಗಿದ್ದಾರೆ.

36 ವರ್ಷದ ಜೆಸ್ಸಿಕಾ ಕಾಸ್ ಅವರ ಜೀವನವೇ ಒಂದು ಸ್ಪೂರ್ತಿದಾಯಕ ಪಾಠ. ಕೈ ಇಲ್ಲದೆ ಇದ್ದರೆ ಏನಾಯಿತು, ತನ್ನ ಕಾಲುಗಳಿಂದಲೇ ವಿಮಾನ ಹಾರಾಟ ಮಾಡುವ ತರಬೇತಿಯನ್ನು ಪಡೆದುಕೊಂಡು ಇಂದು ಯಶಸ್ಸು ಸಾಧಿಸಿದ್ದಾರೆ.

ಇವರ ಸಾಧನೆ ಇಷ್ಟಕ್ಕೆ ಸೀಮಿತವಾಗಿಲ್ಲ.ಕಾರು ಚಲಾವಣೆಯಲ್ಲೂ ಈಕೆ ಸಿದ್ಧ ಹಸ್ತೆ. ಇನ್ನು ಸ್ಕೂಬಾ ಡೈವಿಂಗ್ ವಿದ್ಯೆಯೂ ಸಲೀಸು. ಟೆಕ್ವಾಂಡೋದಲ್ಲಿಯೂ ಪರಿಣಿತೆ.ಇವಳ  ಸಾಧನೆಗೆ ಅಂಗವೈಕಲ್ಯ ಯಾವ ಸಂದರ್ಭದಲ್ಲಿಯೂ ಅಡ್ಡ ಬಂದೇ ಇಲ್ಲ.