ಗೂಗಲ್‌ನಲ್ಲಿ ನೀಡಿರುವಂತೆ ಟ್ವೀಟರ್‌ನಲ್ಲೂ ಈಗ ಬುಕ್‌ಮಾರ್ಕ್ ಸೌಲಭ್ಯ ಲಭ್ಯವಾಗಲಿದೆ. 

ನ್ಯೂಯಾರ್ಕ್: ಗೂಗಲ್‌ನಲ್ಲಿ ನೀಡಿರುವಂತೆ ಟ್ವೀಟರ್‌ನಲ್ಲೂ ಈಗ ಬುಕ್‌ಮಾರ್ಕ್ ಸೌಲಭ್ಯ ಲಭ್ಯವಾಗಲಿದೆ.

ಇದರಿಂದ ಟ್ವೀಟರ್‌ನ 30 ಕೋಟಿ ಬಳಕೆದಾರರು ತಮಗೆ ಬೇಕಾದ ಟ್ವೀಟ್’ಗಳನ್ನು ಸೇವ್ ಮಾಡಿಕೊಂಡು ಬೇಕಾದಾಗ ಅದನ್ನು ಓದಬಹುದಾಗಿದೆ.

ಟ್ವೀಟರ್‌ನಲ್ಲಿ ಬುಕ್ ಮಾರ್ಕ್ ಲಕ್ಷಣವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತಿದೆ ಎಂದು ಟ್ವೀಟರ್‌ನ ಪ್ರಾಡೆಕ್ಟ್ ಡಿಸೈನರ್ ಟೀನಾ ಕೊಯಾಮಾ ಟ್ವೀಟ್ ಮಾಡಿದ್ದಾರೆ.

ಟ್ವೀಟರ್‌ನಲ್ಲಿ ಬುಕ್‌ಮಾರ್ಕ್ ಮಾಡಿದ ಟ್ವೀಟ್‌ಗಳು ಖಾಸಗಿಯಾಗಿ ಸೇವ್ ಆಗುತ್ತವೆ. ಹೀಗಾಗಿ ಬಳಕೆದಾರರು ಮಾತ್ರ ವೀಕ್ಷಿಸಲು ಅವಕಾಶವಿದೆ.