ಶ್ರೀದೇವಿ ಅಂತ್ಯ ಸಂಸ್ಕಾರಕ್ಕೆ ಆಗಮ ಶಾಸ್ತ್ರ ಪಂಡಿತರಿಗೆ ಆಹ್ವಾನ; ಬೋನಿ ಕಪೂರ್’ನಿಂದ ಚಿತೆಗೆ ಅಗ್ನಿಸ್ಪರ್ಶ?

Boney Kapoor Performing all rituals of Sridevi
Highlights

ಶ್ರೀದೇವಿ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ. 

ಮುಂಬೈ (ಫೆ. 28): ಶ್ರೀದೇವಿ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ. 

ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್ ನಿಂದ ಪಾರ್ಥಿವ ಶರೀರ ಮೆರವಣಿಗೆ ಯಾತ್ರೆ ವಿಲೆಪರ್ಲೆ ಸೇವಾ ಸಮಾಜ ಚಿತಾಗಾರದವರೆಗೆ ಸಾಗಲಿದೆ. ಶ್ರೀದೇವಿಗೆ ಮಲ್ಲಿಗೆ ಹೂಗಳೆಂದರೆ ಭಾರೀ ಇಷ್ಟವಾದ್ದರಿಂದ ತೆರೆದ ವಾಹನಕ್ಕೆ ಮಲ್ಲಿಗೆ ಹೂವಿನಿಂದ ಅಲಂಕಾರ ಮಾಡಿಕೊಂಡು ಯಾತ್ರೆ ಹೊರಡಲಿದೆ.  ಪಾರ್ಥಿವ ಶರೀರಕ್ಕೂ ಮಲ್ಲಿಗೆ ಹೂಗಳಿಂದ ಅಲಂಕರಿಸಲಾಗಿದೆ. 

ಧಾರ್ಮಿಕ ವಿಧಿ ವಿಧಾನಗಳು ಹೇಗೆ?
ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸುವುದಕ್ಕೆ ಕುಟುಂಬ ನಿರ್ಧರಿಸಿದೆ. ವಿಧಿವಿಧಾನಗಳನ್ನು ನೆರವೇರಿಸಲು 10ಕ್ಕೂ ಹೆಚ್ಚು ಧಾರ್ಮಿಕ ಪಂಡಿತರನ್ನು  ದಕ್ಷಿಣ ಭಾರತದ ಆಗಮ ಶಾಸ್ತ್ರ ಪಂಡಿತರನ್ನು ಕುಟುಂಬ ಕರೆಸಿಕೊಂಡಿದೆ.  ಮುಂಬೈನ ವಿಲೆ ಪರ್ಲೆ ಸಮಾಜ ಚಿತಾಗಾರದಲ್ಲಿ ಸಂಸ್ಕಾರ ನಡೆಸಲಾಗುತ್ತದೆ. ವಿಧಿವಿಧಾನಗಳನ್ನು ನೆರವೇರಿಸಲು 10ಕ್ಕೂ ಹೆಚ್ಚು ಧಾರ್ಮಿಕ ಪಂಡಿತರನ್ನು ಕುಟುಂಬ ಕರೆಸಿಕೊಂಡಿದೆ. ಮಧ್ಯಾಹ್ನ 3.30ರ ಬಳಿಕ ಅಂತಿಮ ಸಂಸ್ಕಾರ ನೆರವೇರಲಿದೆ. ಪತಿ ಬೋನಿ ಕಪೂರ್ ವಿಧಿ ವಿಧಾನಗಳನ್ನು ನೆರವೇರಿಸುವ ಸಾಧ್ಯತೆಯಿದೆ. 
 

loader