ಭುವನೇಶ್ವರ್ : ಒಡಿಶಾದ ಭುವನೇಶ್ವರದಲ್ಲಿ 2 ಪ್ರತ್ಯೇಕ ಬಾಂಬ್ ದಾಳಿ ಪ್ರಕರಣಗಳು ನಡೆದಿವೆ.

ಬಿಜು ಜನತಾ ದಳ ಹಾಗೂ ಬಿಜೆಪಿ ಎಂಎಲ್ ಎ ಅಭ್ಯರ್ಥಿಗಳ ವಾಹನಗಳ ಮೇಲೆ  ಬಾಂಬ್ ದಾಳಿ ನಡೆಸಲಾಗಿದೆ. ಅನಂತ್ ನಾರಾಯಣ ಜೆನಾ ಮತ್ತು ಜಗನ್ನಾಥ್ ಪ್ರಧಾನ್ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. 

ಬಾಂಬ್ ದಾಳಿಯಲ್ಲಿ  ಇಬ್ಬರು ಮುಖಂಡರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಕ್ಷದ ಕಚೇರಿಗಳ ಮುಂದೆಯೇ ದಾಳಿ  ನಡೆದಿದೆ. 

ಬಿಜೆಪಿ ಮುಖಂಡ ಜಗನ್ನಾಥ್ ಪ್ರಧಾನ್ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭೇಟಿ ಮಾಡಿ ವಾಪಸಾಗುತ್ತಿದ್ದರು. ಈ ವೇಳೆ ಅವರು ಆಗಮಿಸುತ್ತಿದ್ದ ಕಾರ್ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ.  ಮೂರನೇ ಬಾರಿಗೆ ಜಗನ್ನಾಥ್  ಮೇಲೆ ಈ ರೀತಿ ದಾಳಿ ನಡೆದಿದೆ. ಈ ಘಟನೆ ಸಂಬಂಧ ದೂರು ನೀಡಿದ್ದು, ಹೆಚ್ಚಿನ ತನಿಖೆಗೆ ಆಗ್ರಹಿಸಲಾಗಿದೆ. 

ಬಿಜೆಪಿ ಮುಖಂಡರು ಈ ಬಗ್ಗೆ ಚುನಾವಣಾ ಆಯುಕ್ತರಿಗೆ ದೂರಿದ್ದು,ಬಿಜೆಪಿ ಮುಖಂಡರಿಂದ ಈ ಕೃತ್ಯ ನಡೆದಿದ್ದಾಗಿ  ಆರೋಪಿಸಿದ್ದಾರೆ.