1993 ಮಾರ್ಚ್ ತಿಂಗಳಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ 257 ಮಂದಿಯನ್ನು ಮೃತಪಟ್ಟಿದ್ದರುಹಾಗೂ 700ಕ್ಕೂ ಅಃಇಕ ಮಂದಿ ಗಾಯಗೊಂಡಿದ್ದರು.

ಮುಂಬೈ (ಡಿ.29): 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ರುಬಿನಾ ಸುಲೈಮಾನ್ ಮೆಮನ್’ಳ ಫರ್ಲಾ (ಬಿಡುವು) ಅರ್ಜಿಯನ್ನು ಇಂದು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಬೈಯನ್ನು ಬೆಚ್ಚಿಬೀಳಿಸದ್ಧ ಸರಣಿ ಸ್ಫೋಟಗಳ ರೂವಾರಿ ಟೈಗರ್ ಮೆಮನ್ ಸಂಬಂಧಿಯಾಗಿರುವ ರುಬಿನಾ ಹಾಗೂ ಇತರ ಮೂವರು ಸಂಬಂಧಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

ರುಬಿನಾ ಪತಿ ಸುಲೈಮಾನ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಟಾಡಾ ಕೋರ್ಟ್ 2006ರಲ್ಲಿ ಬಿಡುಗಡೆಮಾಡಿತ್ತು. ಇನ್ನೊಬ್ಬ ಸಂಬಂಧಿ ಯಾಕೂಬ್ ಮೆಮನ್’ನನ್ನು ಗಲ್ಲಿಗೇರಿಸಲಾಗಿದೆ.

1993 ಮಾರ್ಚ್ ತಿಂಗಳಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ 257 ಮಂದಿಯನ್ನು ಮೃತಪಟ್ಟಿದ್ದರುಹಾಗೂ 700ಕ್ಕೂ ಅಃಇಕ ಮಂದಿ ಗಾಯಗೊಂಡಿದ್ದರು. ಮುಖ್ಯ ಆರೋಪಿ ಟೈಗರ್ ಮೆಮನ್ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.