ಬೆಂಗಳೂರು(ಸೆ.11): ವ್ಯಕ್ತಿಯೊಬ್ಬ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದಾನೆ. ನಾಗರಾಜ್ ಎಂಬುವವರ ಹೆಸರಿನಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಕರೆ ಮಾಡಿದ ವ್ಯಕ್ತಿ ಸೆ.25ರೊಳಗೆ ವಿಧಾನಸೌಧಕ್ಕೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಸಂಬಂಧ ವಿಧಾನಸೌಧ ಸುತ್ತಮುತ್ತ ಹೈಅಲಾರ್ಟ್ ಘೋಷಿಸಲಾಗಿದ್ದು ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದಿಂದ ತೀರ್ವ ಪರಿಶೀಲನೆ ನಡೆಸಲಾಗಿದೆ. ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.