ತಡರಾತ್ರಿ ಖಾಸಗಿ ಬಸ್​​’ವೊಂದರಲ್ಲಿ ಹುಸಿ ಬಾಂಬ್ ವಿಚಾರವು ಅವಾಂತರವನ್ನೇ ಎಬ್ಬಿಸಿದೆ. ಬೆಂಗಳೂರಿನಿಂದ ಸಿಂಧಗಿಗೆ ಹೊರಟಿದ್ದ  ವೇಳೆ ಬಸ್​​ನಲ್ಲಿ ಬಾಂಬ್ ಇರುವುದಾಗಿ ಇಬ್ಬರು ಪ್ರಯಾಣಿಕರು ಸುದ್ದಿ ಹಬ್ಬಿಸಿದ್ದಾರೆ.

ತುಮಕೂರು : ತಡರಾತ್ರಿ ಖಾಸಗಿ ಬಸ್​​’ವೊಂದರಲ್ಲಿ ಹುಸಿ ಬಾಂಬ್ ವಿಚಾರವು ಅವಾಂತರವನ್ನೇ ಎಬ್ಬಿಸಿದೆ. ಬೆಂಗಳೂರಿನಿಂದ ಸಿಂಧಗಿಗೆ ಹೊರಟಿದ್ದ ವೇಳೆ ಬಸ್​​ನಲ್ಲಿ ಬಾಂಬ್ ಇರುವುದಾಗಿ ಇಬ್ಬರು ಪ್ರಯಾಣಿಕರು ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ಭಯಗೊಂಡ ಪ್ರಯಾಣಿಕರೆಲ್ಲರೂ ದಾರಿ ಮಧ್ಯೆಯೇ ಬಸ್’ನಿಂದ ಕೆಳಕ್ಕಿಳಿದಿದ್ದಾರೆ.

ತುಮಕೂರಿನ ಕ್ಯಾತಸಂದ್ರ ಬಳಿ ತೆರಳುತ್ತಿದ್ದ ವೇಳೆ ಇಬ್ಬರು ಪ್ರಯಾಣಿಕರು ಬಸ್’ನಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಹಾಕಿದ್ದಾರೆ. ಹೊಸ ಬಡಾವಣೆ ಠಾಣೆಗೆ ಬಂದು ಪರಿಶೀಲಿಸಿದಾಗ ಪ್ರಯಾಣಿಕರ ಅನುಮಾನಕ್ಕೆ ತೆರೆ ಬಿದ್ದಿದೆ. ಸುರಕ್ಷಿತವಾಗಿ ಬಸ್ ಸಿಂಧಗಿಗೆ ತಲುಪಿದೆ.