ಜೋದ್'ಪುರ[ಅ.01]: ಜೋದ್'ಪುರದಿಂದ ದೆಹಲಿಗೆ ಹೊರಡುತ್ತಿದ್ದ ವಿಮಾನದಲ್ಲಿ ಬಾಂಬ್ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಜೋದ್ ಪುರ ವಿಮಾನ ನಿಲ್ದಾಣದಿಂದ ಹೊರಡುವ ಎಲ್ಲ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ವಿಮಾನ ನಿಲ್ದಾಣದ ಸಿಬ್ಬಂದಿ ಹಾಗೂ ಸಿಐಎಸ್'ಎಫ್ ಬಾಂಬ್ ಶೋಧ ಕಾರ್ಯಾಚರಣೆ ಕೈಗೊಂಡಿದ್ದು ತುರ್ತಾಗಿ ತೆರಳುವ ಪ್ರಯಾಣಿಕರನ್ನು ಬೇರೆ ವಿಮಾನಗಳ ಮೂಲಕ ವ್ಯವಸ್ಥೆ ಮಾಡಲಾಗಿದೆ. ಸದ್ಯ ಜೋದ್ ಪುರ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ, ಜೆಟ್ ಏರ್ ವೇಸ್ ಹಾಗೂ ಸ್ಪೇಸ್ ಜೆಟ್ ವಿಮಾನಗಳ ಸೌಲಭ್ಯವಿದೆ. 

ಪ್ರಕರಣ ಸಂಬಂಧ ಸಿಐಎಸ್ ಎಫ್ ಸಿಬ್ಬಂದಿ 6 ಪ್ರಯಾಣಿಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲಾಗಿದ್ದು ಕೆಲ ಸಮಯದ ನಂತರ ಮೂವರನ್ನು ಬಿಡುಗಡೆಗೊಳಿಸಲಾಗಿದೆ. ಉಳಿದ ಮೂವರು ಪೊಲೀಸರ ವಶದಲ್ಲಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.