. ಈಗಾಗಲೇಶರಣಾಗಲು ಸಕಲ ಸಿದ್ಧತೆ ಮಾಡಿಕೊಂಡ ರೌಡಿ ನಾಗನಿಗೆ ಪೊಲೀಸರು ಹಿಂಸಿಸುವ ಭಯವಿದೆ. ಇದರಿಂದ ಪಾರಾಗಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾನೆ.

ಬೆಂಗಳೂರು(ಮೇ.09): ಎರಡನೇ ಸೀಡಿ ಬಿಡುಗಡೆ ಮಾಡಿರುವ ರೌಡಿಶೀಟರ್ ನಾಗ ಮತ್ತದೆ ಹಳಿಯ ರಾಗವೆಂಬಂತೆ ರಾಜಕಾರಣಿಗಳು ಹಾಗೂ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾನೆ. ಈಗಾಗಲೇ

ಶರಣಾಗಲು ಸಕಲ ಸಿದ್ಧತೆ ಮಾಡಿಕೊಂಡ ರೌಡಿ ನಾಗನಿಗೆ ಪೊಲೀಸರು ಹಿಂಸಿಸುವ ಭಯವಿದೆ. ಇದರಿಂದ ಪಾರಾಗಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾನೆ.

ತನ್ನ ದೇಹವನ್ನು ಸಂಪೂರ್ಣ ಮೆಡಿಕಲ್​ ಚೆಕ್​ ಮಾಡಿಸಿಕೊಂಡ ನಾಗ ಬಿಪಿ, ಶುಗರ್​​, ಇಸಿಜಿ, ಎಂಆರ್​ಐ ಸ್ಕ್ಯಾನ್​​ ಸೇರಿದಂತೆ ಎಲ್ಲ ಪರೀಕ್ಷೆ ಮಾಡಿಕೊಡಿದ್ದಾನೆ. ತನ್ನ ದೇಹದ ಮೇಲೆ ಯಾವುದೇ ಗಾಯಗಳಿಲ್ಲ ಎಂದು ವೈದ್ಯರಿಂದ ಪ್ರಮಾಣಪತ್ರ ಕೂಡ ಪಡೆದಿದ್ದು, ಪೊಲೀಸರು ಹಿಂಸಿಸಿದರೆ ಮೆಟಿಕಲ್​ ಸರ್ಟಿಫಿಕೇಟ್​​​​ ತೋರಿಸಿ ರಕ್ಷಸಿಕೊಳ್ಳುವ ತಂತ್ರ ಈತನದ್ದು. ತನ್ನ ದೇಹದ ಮೇಲೆ ಸಣ್ಣ ಗಾಯವಾದರೂ ಬಿಪಿ, ಶುಗರ್​​​​​​​​​​​​​​​​​​​​​​​​​​ ಹೆಚ್ಚು ಕಡಿಮೆ ಆದರೂ ಪೊಲೀಸರ ಮೇಲೆ ಗೂಬೆ ರೌಡಿ ಶೀಟರ್'ನದು. ನ್ಯಾಯಾಲಯ ಹಾಗೂ ಪೊಲೀಸರು ಕೂಡ ನಾಗನ ಅಳಲಿಗೆ ಒಂಚೂರು ಸೊಪ್ಪು ಹಾಕಿಲ್ಲ.