ಉಗ್ರರಿಂದ ಮತ್ತೆ ದಾಳಿ| ಜಮ್ಮು-ಕಾಶ್ಮೀರದ ತ್ರಾಲ್ನಲ್ಲಿ ಐಇಡಿ ಸ್ಫೋಟ| ಐಇಡಿ ಸ್ಫೋಟಗೊಂಡು ಒಬ್ಬ ನಾಗರಿಕನಿಗೆ ಗಾಯ| ಸೇನಾ ಪಡೆಯನ್ನು ಗುರಿಯಾಗಿಸಿಕೊಂಡು  ಐಇಡಿ ಸ್ಫೋಟ.

ಶ್ರೀನಗರ,[ಮಾ.2]: ಜಮ್ಮು ಕಾಶ್ಮೀರದ ಟ್ರಾಲ್ ನಲ್ಲಿ ಮತ್ತೆ ಬಾಂಬ್​ ಸ್ಟೋಟ ಮಾಡಲಾಗಿದೆ. ಭಾರತೀಯ ಸೇನಾ ಪಡೆಯನ್ನು ಗುರಿಯಾಗಿಸಿಕೊಂಡು ಐಇಡಿ ಸ್ಪೋಟಿಸಲಾಗಿದೆ.

Add Asianetnews Kannada as a Preferred SourcegooglePreferred

ಇಂದು [ಶನಿವಾರ] ಮುಂಜಾನೆ ಸುಮರು 3 ಗಂಟೆಗೆ ಟ್ರಾಲ್​ ಬಳಿ ಸ್ಪೋಟ ನಡೆದಿದ್ದು, ಓರ್ವ ನಾಗರೀಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶಾಂತಿ ಅಂತ ಬಾಯಿ ಬಡುಕೊಳ್ಳುತ್ತಿದ್ದಾರೆ. ಆದ್ರೆ ಉಗ್ರರನ್ನು ಮಟ್ಟಹಾಕಲು ಹಿಂದೇಟು ಹಾಕುತ್ತಿದೆ. ಪದೇ-ಪದೇ ಗಡಿಯಲ್ಲಿ ಒಂದು ಕಡೆ ಉಗ್ರರ ಅಟ್ಟಹಾಸ ಮತ್ತೊಂದು ಕಡೆ ಪಾಕ್ ಸೇನೆಯ ಪುಂಡಾಟ ಮುಂದುವರಿಯುತ್ತಲೇ ಇದೆ.

ಮೊನ್ನೇ ಅಷ್ಟೇ ಭಾರತ ವಾಯುಸೇನೆ ಪಾಕ್ ಗಡಿದಾಟಿ ಉಗ್ರರ ನೆಲೆಗಳನ್ನು ಉಡೀಸ್ ಮಾಡಿತ್ತು. ಆದ್ರೂ ಬುದ್ದಿ ಕಲಿಯದ ಉಗ್ರರು ತಮ್ಮ ಆಟಾಟೋಪ ಮುಂದುವರಿಸಿದ್ದಾರೆ. ಇದಕ್ಕೆ ಭಾರತ ಸೇನೆಯೂ ಸಹ ಗಡಿಯಲ್ಲಿ ಉಗ್ರರನ್ನು ಸೆದೆಬಡೆಯಲು ಟೊಂಕ ಕಟ್ಟಿ ನಿಂತಿದೆ. 

ಫೋಟೋ: ಸಾಂದರ್ಭಿಕ ಚಿತ್ರ