ಬಾಲಿವುಡ್ ಖ್ಯಾತ ನಟ ಪದ್ಮಭೂಷಣ ಶಶಿ ಕಪೂರ್ ಇಂದು ವಿಧಿವಶರಾಗಿದ್ದಾರೆ.
ಮುಂಬೈ: ಬಾಲಿವುಡ್ ಖ್ಯಾತ ನಟ ಪದ್ಮಭೂಷಣ ಶಶಿ ಕಪೂರ್ ಇಂದು ವಿಧಿವಶರಾಗಿದ್ದಾರೆ.
79 ವರ್ಷ ಪ್ರಾಯದ ಶಶಿ ಕಪೂರ್ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಮುಂಬೈಯ ಕೋಕಿಲಾಬೆನ್ ಆಸ್ಪತ್ರೆಯಲ್ಲಿಂದು ಕೊನೆಯುಸಿರೆಳೆದಿದ್ದಾರೆ.
18 ಮಾರ್ಚ್, 1938ರಂದು ಕೋಲ್ಕತ್ತಾದಲ್ಲಿ ಜನಿಸಿದ್ದ ಶಶಿ ಕಪೂರ್, ಬಾಲನಟನಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಸುಮಾರು 116 ಚಿತ್ರಗಳಲ್ಲಿ ನಟಿಸಿದ್ದ ಶಶಿ ಕಪೂರ್ 70-80 ದಶಕದಲ್ಲಿ ಬಾಲಿವುಡ್’ನ ಸಾಮ್ರಾಟನಾಗಿ ಮೆರೆದಿದ್ದರು.
2011ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದ ಶಶಿಕಪೂರ್, 2014ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಭಾಜನರಾಗಿದ್ದರು. 3 ಬಾರಿ ರಾಷ್ಟ್ರ ಪ್ರಶಸ್ತಿ ಯನ್ನು ಪಡೆದಿದ್ದರು.
