ಬಾಲಿವುಡ್​​​ನ ಪದ್ಮಾವತಿ ಚಿತ್ರದ ಬೆಂಬಲಕ್ಕೆ ಭಾರತೀಯ ಚಿತ್ರೋದ್ಯಮ ನಿಂತಿದೆ. ನೂರಾರು ಚಿತ್ರ ನಿರ್ಮಾಪಕರು ಹಾಗೂ ಕಾರ್ಮಿಕರು ಇವತ್ತು 15 ನಿಮಿಷಗಳ ಕಾಲ ಚಿತ್ರೀಕರಣ ಸ್ಥಗಿತಗೊಳಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದ್ದಾರೆ.

ನವದೆಹಲಿ (ನ.26): ಬಾಲಿವುಡ್​​​ನ ಪದ್ಮಾವತಿ ಚಿತ್ರದ ಬೆಂಬಲಕ್ಕೆ ಭಾರತೀಯ ಚಿತ್ರೋದ್ಯಮ ನಿಂತಿದೆ. ನೂರಾರು ಚಿತ್ರ ನಿರ್ಮಾಪಕರು ಹಾಗೂ ಕಾರ್ಮಿಕರು ಇವತ್ತು 15 ನಿಮಿಷಗಳ ಕಾಲ ಚಿತ್ರೀಕರಣ ಸ್ಥಗಿತಗೊಳಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದ್ದಾರೆ.

Add Asianetnews Kannada as a Preferred SourcegooglePreferred

ಭಾರತೀಯ ಚಿತ್ರ ಮತ್ತು ಟಿವಿ ನಿರ್ದೇಶಕರ ಸಂಘ ಸೇರಿದಂತೆ ದೇಶಾದ್ಯಂತ ಒಟ್ಟು 19 ಚಿತ್ರೋದ್ಯಮ ಸಂಘಟನೆಗಳು 15 ನಿಮಿಷಗಳ ಕಾಲ ಚಿತ್ರೀಕರಣ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಮುಂಬೈನ ಫಿಲ್ಮ್ ಸಿಟಿಯಲ್ಲಿ ನನಗೆ ಸ್ವಾತಂತ್ರ್ಯ ಇದೆಯೇ? ಎಂಬ ಘೋಷಣೆಯಡಿ ಭಾರತೀಯ ಚಿತ್ರೋದ್ಯಮ ಪ್ರತಿಭಟನೆ ನಡೆಸಲಿದ್ದಾರೆ. ಇದರಲ್ಲಿ ಸುಮಾರು 600-700 ಚಿತ್ರ ನಿರ್ಮಾಪಕರು, ಬರಹಗಾರರು, ಕಾರ್ಮಿಕರು ಭಾಗವಹಿಸುವ ಮೂಲಕ 'ಪದ್ಮಾವತಿ'ಯನ್ನು ಬೆಂಬಲಿಸಲಿದ್ದಾರೆ. ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರದಲ್ಲಿ ಇತಿಹಾಸ ತಿರುಚಲಾಗಿದೆ ಮತ್ತು ರಾಣಿ ಪದ್ಮಾವತಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ರಜಪೂತ್ ಸಂಘಟನೆಗಳು ಹಾಗೂ ರಾಜಕೀಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಚಿತ್ರ ಬಿಡುಗಡೆಗೂ ಮುನ್ನ ಹಲವು ರಾಜ್ಯಗಳಲ್ಲಿ ನಿಷೇಧ ಹೇರಲಾಗಿದೆ.