. ನಾನು ಒಂದು ಹೆಣ್ಣು ಅನ್ನೋದನ್ನು ಮರೆಯಬೇಡಿ’

ಬಾಲಿವುಡ್‌ನ ಬಿಚ್ಚು ಮಾತಿನ ಬೆಡಗಿ ಇಲಿಯಾನ ಡಿ’ಕ್ರೂಸ್ ಈಗಿಗ ಸಾಕಷ್ಟು ಸುದ್ದಿಯಲ್ಲಿರುವುದು ಗೊತ್ತೇ ಇದೆ. ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ಲೋಕದ ‘ಸಂಬಂಧ ಸಂಸ್ಕೃತಿ’ ಬಗ್ಗೆ ದನಿ ಎತ್ತಿ ಸುದ್ದಿಯಾಗಿದ್ದ ವೆರಿ ಬೋಲ್ಡ್ ಇಲಿಯಾನ ಈಗ ತನ್ನ ತಂಟೆಗೆ ಬಂದ ಅಭಿಮಾನಿಗೆ ಟ್ವಿಟ್ಟರ್‌ನಲ್ಲಿ ಸಖತ್ ಪಂಚ್ ನೀಡಿ ಸುದ್ದಿಯಾಗಿದ್ದಾರೆ.

'ಎಂಥ ಅಸಹ್ಯದ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ನಾನು ಪಬ್ಲಿಕ್ ಫಿಗರ್. ಹಾಗಾಗಿಯೇ ನನಗೆ ಖಾಸಗಿ ಜೀವನವಿಲ್ಲ ಎಂಬುದನ್ನೂ ಅರ್ಥ ಮಾಡಿಕೊಂಡಿದ್ದೇನೆ. ಹಾಗಂತ ನನ್ನ ಬಳಿ ಅಸಭ್ಯವಾಗಿ ವರ್ತಿಸುವ ಹಕ್ಕು ಯಾವುದೇ ವ್ಯಕ್ತಿಗಿಲ್ಲ. ಅಭಿಮಾನಿಗಳ ವರ್ತನೆಯೇ ಹಾಗೆ ಎಂದು ಕನ್‌ಫ್ಯೂಸ್ ಕೂಡ ಆಗಬೇಡಿ ಎಂದು ಟ್ವಿಟ್ಟರ್‌ನಲ್ಲಿ ಜಾಡಿಸಿದ್ದಾರೆ.

ಇದಕ್ಕೆಲ್ಲಾ ಕಾರಣ ಏನು ಗೊತ್ತೆ? ಇಲಿಯಾನ ಮುಂಬೈನಲ್ಲಿ ತನ್ನ ಮುಂದಿನ ಸಿನಿಮಾದ ಪ್ರಮೋಷನ್ ಮುಗಿಸಿ ಕಾರಿನಲ್ಲಿ ತೆರಳುತ್ತಿದ್ದಾಗ ಅಭಿಮಾನಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಕೆರಳಿದ ‘ಬಾದ್‌ಶಾಹೋ’ ಸ್ಟಾರ್ ಇಲಿಯಾನ ಕೆರಳಿ ಕೆಂಡಾಮಂಡಲವಾಗಿದ್ದಾರೆ. ಇಲಿಯಾನ ಟ್ವೀಟಿಗೆ ಜುಡ್ವಾ 2 ವರುಣ್ ಧವನ್ ಸೇರಿದಂತೆ ಹಲವಾರು ಬಾಲಿವುಡ್ ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ.?

(ಕನ್ನಡಪ್ರಭ ವಾರ್ತೆ)