ಮಲ್ಲಿಕಾ ಶೆರಾವತ್ ನನ್ನು ಮಧ್ಯರಾತ್ರಿ ಕೋಣೆಗೆ ಕರೆದ ಸ್ಟಾರ್ ನಟ ಯಾರು ?

Bollywood Actress Mallika Sherawat Shares Her Casting Couch Experiences
Highlights

  • ಕಾಸ್ಟಿಂಗ್ ಕೌಚ್ ಬಗ್ಗೆ ಭಯಾನಕ ಸಂಗತಿಗಳನ್ನು ಹೇಳಿಕೊಂಡ ಬಾಲಿವುಡ್ ನಟಿ
  • ನಟಿಯನ್ನು ಮಧ್ಯರಾತ್ರಿ ಕರೆದಿದ್ದ ನಟ, ನಿರ್ದೇಶಕರು

ಮುಂಬೈ[ಜು.07]: ಕಾಸ್ಟಿಂಗ್ ಕೌಚ್ ಬಗ್ಗೆ ಬಾಲಿವುಡ್ ನಟಿ  ಮಲ್ಲಿಕಾ ಶೆರಾವತ್ ಮಹತ್ವದ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. 

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಅನೇಕ ನಟ, ನಿರ್ದೇಶಕರು ಹಾಗೂ ನಿರ್ಮಾಪಕರ ಮಂಚದ ಆಹ್ವಾನವನ್ನು ತಿರಸ್ಕರಿಸಿದ ಕಾರಣ ಹಲವು ಸಿನಿಮಾಗಳಿಗೆ ನನಗೆ ಅವಕಾಶ ಸಿಗಲಿಲ್ಲ.

ಮರ್ಡರ್ ಸಿನಿಮಾದ ನಂತರ ನನಗೆ ಹೆಚ್ಚು ಅವಕಾಶಗಳು ದೊರಕಿತ್ತು. ಸಹನಟನೊಬ್ಬನೊಂದಿಗೆ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ನಟಿಸಬೇಕಿತ್ತು. ಆತ  ಸಿನಿಮಾದ ಚಿತ್ರೀಕರಣದ ನಂತರ ತನ್ನ ಕೋಣೆಗೆ ಕರೆದ. ನಾನು ಬೇಡ ಎಂದಿದ್ದಕ್ಕೆ ಸಿನಿಮಾದಿಂದ ಕೋಕ್ ನೀಡಲಾಯಿತು ಎಂದು ತಮ್ಮ ಅನುಭವವನ್ನು ವಿವರಿಸಿದರು.

ಅದೇ ರೀತಿ ನಿರ್ದೇಶಕನೊಬ್ಬ ಬೆಳಗಿನ ಜಾವ ಮೂರು ಗಂಟೆಗೆ ತನ್ನ ರೂಮಿಗೆ ಆಹ್ವಾನಿಸಿದ. ನಾನು ಒಪ್ಪಿಕೊಳ್ಳದ ಕಾರಣ ಆತ ಹಾಗೂ ಆತನ ಪರಿಚಯಿಸ್ಥರ ಸಿನಿಮಾಗಳಿಗೆ ನನ್ನನ್ನು ಡ್ರಾಪ್ ಮಾಡಲಾಯಿತು. ಇಂತಹ ಅನೇಕ ಘಟನೆಗಳು ನನ್ನ ಜೀವನದಲ್ಲಿ ನಡೆದಿದೆ ಎಂದು ನಟಿ ತಿಳಿಸಿದರು. ಆದರೆ ಅವರ ಹೆಸರುಗಳನ್ನು ಮಾತ್ರ ಹೇಳಲಿಲ್ಲ.

ಕಾಸ್ಟಿಂಗ್ ಕೌಚ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ. ಕನ್ನಡದ ನಟಿ ಶೃತಿ ಹರಿಹರನ್ ಸಾರ್ವಜನಿಕ ಚರ್ಚೆಯೊಂದರಲ್ಲಿ ನಿರ್ಮಾಪಕರೊಬ್ಬರು ತಮಗೆ ಸಹಕರಿಸದರೆ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದು ತಾವು ಅವರಿಗೆ ಸರಿಯಾಗಿ ಪ್ರತ್ಯುತ್ತರ ನೀಡಿರುವುದಾಗಿ  ತಿಳಿಸಿದ್ದರು. ಮತ್ತೊಬ್ಬ ನಟಿ ಖುಷ್ಬು ಕೂಡ ತಮಗಾದ ಅನುಭವವನ್ನು ಬಹಿರಂಗ ಪಡಿಸಿದ್ದರು.       

loader