ಲೈಂಗಿಕ ಕಿರುಕುಳದ 47 ವರ್ಷದ ಹಳೆಯ ಪ್ರಕರಣ: ಬಾಲಿವುಡ್ ನಟನ ವಿರುದ್ಧ ದೂರು ದಾಖಲು

First Published 7, Mar 2018, 8:40 PM IST
Bollywood actor Jeetendra booked for sexual assault in a 47 year old case
Highlights

ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಮದ್ಯಪಾನ ಮಾಡಿದ್ದ ನಟ ಮಹಿಳೆಯ ಕೊಠಡಿಗೆ ಆಗಮಿಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ'ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮುಂಬೈ(ಮಾ.07): ಬಾಲಿವುಡ್ ನಟ ಜಿತೇಂದ್ರ ವಿರುದ್ಧ 47 ವರ್ಷಗಳ ಹಿಂದೆ ನಡೆದಿದ್ದ ಲೈಂಗಿಕ ಕಿರುಕುಳದ ಹಳೆಯ ಪ್ರಕರಣ ದಾಖಲಾಗಿದೆ.

ಜಿತೇಂದ್ರ ಸಂಬಂಧಿಕರೊಬ್ಬರು ತಮ್ಮ ಮೇಲೆ 47 ವರ್ಷಗಳ ಹಿಂದೆ ಶಿಮ್ಲಾ ಹೋಟೆಲ್ ಒಂದರಲ್ಲಿ  ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ದೂರಿನನ್ವಯ ನಟನ ವಿರುದ್ಧ ಚೊಟ್ಟ ಶಿಮ್ಲಾ ಪೊಲೀಸ್ ಸ್ಟೇಷನ್'ನಲ್ಲಿ ಐಪಿಸಿ ಸೆಕ್ಷನ್ 354 ರಡಿ ದೂರು ದಾಖಲಿಸಿಕೊಂಡಿದ್ದಾರೆ.

ಇಮೇಲ್ ಮಾಡಿದ ನಂತರ ದೂರು ದಾಖಲಿಸಿಕೊಂಡಿದ್ದು ನಂತರ ಲಿಖಿತವಾಗಿ ದೂರು ನೀಡಿದ್ದಾರೆ. ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಮದ್ಯಪಾನ ಮಾಡಿದ್ದ ನಟ ಮಹಿಳೆಯ ಕೊಠಡಿಗೆ ಆಗಮಿಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ'ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಳೆಯ ಕಾನೂನಿನ್ವಯ  ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ನಟನ ಪರ ವಕೀಲರು ದೂರನ್ನು ಅಲ್ಲಗಳೆದಿದ್ದು' ಇದೊಂದು ಆಧಾರರಹಿತ ಹಾಗೂ ಹಾಸ್ಯಾಸ್ಪದ' ಎಂದು ತಿಳಿಸಿದ್ದಾರೆ. 75 ವರ್ಷದ ಜೀತೇಂದ್ರ ಅವರು 70 ಹಾಗೂ 80ರ ದಶಕದಲ್ಲಿ ಬಾಲಿವುಡ್'ನಲ್ಲಿ ಹೊಸ ಅಲೆಯ ಚಿತ್ರಗಳಿಗೆ ನಾಯಕರಾಗಿದ್ದರು.

loader