ಅಪರೂಪದ ನರರೋಗದಿಂದ ಬಳಲುತ್ತಿದ್ದಾರೆ ನಟ ಇರ್ಫಾನ್ ಖಾನ್ | ಆರೋಗ್ಯ ವೃದ್ಧಿಗಾಗಿ ನಾಸಿಕದ ತ್ರಯಂಬಕೇಶ್ವರ ದೇವಾಲಯಕ್ಕೆ ಭೇಟಿ 

ಮುಂಬೈ (ನ. 27): ಅಪರೂಪದ ನರರೋಗದಿಂದ ಬಳಲುತ್ತಿರುವ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ಬ್ರಿಟನ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರ ನಡುವೆಯೇ ಅವರು ಇತ್ತೀಚೆಗೆ ಹೆಚ್ಚು ಸುದ್ದಿ ಮಾಡದೆಯೇ ಭಾರತಕ್ಕೆ ಬಂದು, ನಾಸಿಕ್‌ನಲ್ಲಿರುವ ತ್ರಯಂಬಕೇಶ್ವರ ಶಿವಾಲಯಕ್ಕೆ ಭೇಟಿ ನೀಡಿ, ಹೋಮ-ಹವನ ನಡೆಸಿದ್ದಾರೆ. 2 ದಿನಗಳ ಕಾಲ ನಾಸಿಕ್‌ನಲ್ಲಿ ತಂಗಿದ್ದ ಖಾನ್, ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಕಾರ್ಯಕ್ರಮದ ಬಳಿಕ ಅವರು ಯಾರಿಗೂ ತಿಳಿಸದೆ, ಪುನಃ ಸೀದಾ ಮರಳಿ ಲಂಡನ್‌ಗೆ ತೆರಳಿದ್ದಾರೆ.