ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಅವರನ್ನು ಜಿಎಸ್‌ಟಿ ಪ್ರಚಾರ ರಾಯಭಾರಿಯನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
ನವದೆಹಲಿ (ಜೂ.20): ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರನ್ನು ಜಿಎಸ್ಟಿ ಪ್ರಚಾರ ರಾಯಭಾರಿಯನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿಯು ಬಚ್ಚನ್ ಅವರನ್ನು ಜಿಎಸ್ಟಿ ಪ್ರಚಾರ ರಾಯಭಾರಿ ನೇಮಕವನ್ನು ಅಧಿಕೃತಗೊಳಿಸಲಿದೆ. 40 ಸೆಕೆಂಡ್ಗಳ ವಿಡಿಯೊದಲ್ಲಿ ಬಚ್ಚನ್ ಕಾಣಿಸಿಕೊಂಡಿದ್ದು, ರಾಷ್ಟ್ರ ಧ್ವಜದಲ್ಲಿ ಇರುವ ಮೂರು ಬಣ್ಣಗಳು ಏಕರೂಪತೆ ಸಾರುವಂತೆ, ‘ಜಿಎಸ್ಟಿ ಸಹ ಒಂದು ದೇಶ, ಒಂದು ತೆರಿಗೆ, ಒಂದು ಮಾರುಕಟ್ಟೆ ಸೃಷ್ಟಿಸುವ ಮಹತ್ವದ ನಿರ್ಧಾರವಾಗಿದೆ’ ಎಂಬ ಸಂದೇಶವನ್ನು ನೀಡಿದ್ದಾರೆ. ‘ಏಕರೂಪದ ರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಸಲು ಜಿಎಸ್ಟಿ ಮಹತ್ವದ ಹೆಜ್ಜೆಯಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವಾಲಯ ಟ್ವೀಟ್ ಮಾಡಿದ್ದು, ಬಚ್ಚನ್ ಅವರು ಜಿಎಸ್ಟಿ ಬಗ್ಗೆ ಪ್ರಚಾರ ಮಾಡುತ್ತಿರುವ ವಿಡಿಯೊ ತುಣುಕನ್ನು ಟ್ವೀಟ್ ಜತೆ ಸೇರ್ಪಡೆ ಮಾಡಿದೆ.
