ಸಾಂದರ್ಭಿಕ ಚಿತ್ರ

ಕುವೈತ್(ಮೇ.08): ಬೋಯಿಂಗ್ ವಿಮಾನವನ್ನು ಪರಿಶೀಲಿಸುತ್ತಿದ್ದ ಭಾರತೀಯ ಮೂಲದ ತಂತ್ರಜ್ಞ, ಅದೇ ವಿಮಾನದ ಚಕ್ರದಡಿ ಸಿಕ್ಕು ಸಾವನ್ನಪ್ಪಿರುವ ದಾರುಣ ಘಟನೆ ಕುವೈತ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕುವೈತ್ ಏರ್’ವೇಸ್’ನ ಬೋಯಿಂಗ್ 777 ವಿಮಾನವನ್ನು ನಿಲ್ದಾಣದಿಂದ ಟರ್ಮಿನಲ್ ಗೆ ಕೊಂಡೊಯ್ಯುತ್ತಿದ್ದ ವೇಳೆ, ಟೋಯಿಂಹಗ್ ಮಶಿನ್ ಮುರಿದು ಬಿದ್ದಿದೆ. ಈ ವೇಳೆ ಸ್ಥಳದಲ್ಲಿ ಕರ್ತವ್ಯನಿರತರಾಗಿದ್ದ ಕೇರಳ ಮೂಲದ ಆನಂದ್ ರಾಮಚಂದ್ರನ್ ವಿಮಾನದ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾರೆ.

ಈ ಕುರಿತು ತನಿಖೆಗೆ ಆದೇಶಿಸಿರುವ ಕುವೈತ್ ವಿಮಾನ ನಿಲ್ದಾಣ ಪ್ರಾಧಿಕಾರ, ಆನಂದ್ ರಾಮಚಂದ್ರನ್  ಅವರ ಮೃತದೇಹವನ್ನು ಕೇರಳಕ್ಕೆ ರವಾನಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದೆ.