ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ  ಮರಣೋತ್ತರ ಪರೀಕ್ಷೆ ಕೈಗೊಂಡಿದ್ದು ಪೊಲೀಸರು ಮೃತದೇಹ ಹಸ್ತಾಂತರಿಸಲು ಸನ್ಯಾಸಿನಿಯ ಸಂಬಂಧಿಕರ ಬರುವಿಕೆಗಾಗಿ ಕಾಯುತ್ತಿದ್ದಾರೆ.

ತಿರುವನಂತಪುರಂ[ಸೆ.09]: ಸನ್ಯಾಸಿನಿಯೊಬ್ಬರು ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಪಟನಾಪುರಂ ಬಳಿ ಪತ್ತೆಯಾಗಿದೆ.

ಸುಸಾನ್ ಮ್ಯಾಥ್ಯೋ[54] ಮೃತರು. ಇವರು ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ ಶಾಲೆಯಲ್ಲಿ ಉಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮೂರ್ಚೆ ರೋಗಕ್ಕೆ ತುತ್ತಾಗಿದ್ದ ಇವರು ಶನಿವಾರ ವೈದ್ಯರ ಬಳಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದರು. ಇಂದು ಬೆಳಿಗ್ಗೆ ಅವರ ಮೃತದೇಹ ಚರ್ಚಿನ ಹಿಂಭಾಗ ಪತ್ತೆಯಾಗಿದೆ.ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಅಶೋಕನ್ ತಿಳಿಸಿದ್ದಾರೆ.

ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ಕೈಗೊಂಡಿದ್ದು ಪೊಲೀಸರು ಮೃತದೇಹ ಹಸ್ತಾಂತರಿಸಲು ಸನ್ಯಾಸಿನಿಯ ಸಂಬಂಧಿಕರ ಬರುವಿಕೆಗಾಗಿ ಕಾಯುತ್ತಿದ್ದಾರೆ. ವೈದ್ಯಕೀಯ ವರದಿ ಬಂದ ನಂತರ ಕೊಲೆ ಅಥವಾ ಸಹಜ ಸಾವೋ ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗುವುದೆಂದು ಅಶೋಕನ್ ಮಾಹಿತಿ ನೀಡಿದ್ದಾರೆ.