ಬೆಂಗಳೂರು (ಸೆ. 20): ಹೈದರಾಬಾದ್ ನಲ್ಲಿರುವ ತೆಲುಗು ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರ ಫಾರ್ಮ್ ಹೌಸ್ ನಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿದೆ. 

ಚಕಲಿ ಪಂಡು ಎನ್ನುವ ವ್ಯಕ್ತಿ 2016 ರಲ್ಲಿ ನಾಗಾರ್ಜುನ ಅವರ ಫಾರ್ಮ್ ಹೌಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಆತ್ಮಹತ್ಯೆ ಮಾಡಿಕೊಂಡ ಚಕಲಿ ಪಂಡು ಪಾಪಿರೆಗುಡ್ಡ ಹಳ್ಳಿಯಿಂದ ಬಂದವರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರ ಸಹೋದರ ಅಕಾಲಿಕ ಮರಣವನ್ನುಪ್ಪುತ್ತಾರೆ. ಅವರ ಸಾವು ಪಾಂಡುರನ್ನು ಡಿಪ್ರೇಶನ್ ಗೆ ತಳ್ಳಿತು. ನಾಗಾರ್ಜುನ್ ಫಾರ್ಮ್ ಹೌಸ್ ಗೆ ಕೆಲಸ ಹುಡುಕಿಕೊಂಡು ಬಂದು ಕೊನೆಗೆ ಅಲ್ಲಿಯೇ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. 

- ಸಾಂದರ್ಭಿಕ ಚಿತ್ರ