Asianet Suvarna News Asianet Suvarna News

ಬೆಂಗಳೂರಿನಲ್ಲಿ ದಲೈಲಾಮ ಹತ್ಯೆಗೆ ಸ್ಕೆಚ್?

ಹೊರ ಬಿತ್ತು ಸ್ಫೋಟಕ ಮಾಹಿತಿ | ಧರ್ಮಗುರು ದಲೈಲಾಮಾ ಹತ್ಯೆಗೆ ಸ್ಕೆಚ್ | ಬೋಧಗಯಾ ಸ್ಫೋಟದ ಪ್ರಮುಖ ಆರೋಪಿಯಿಂದ ಹತ್ಯೆಗೆ ಸ್ಕೆಚ್ 

Bodh Gaya blast accused plan to murder Dalai Lama
Author
Bengaluru, First Published Oct 1, 2018, 9:43 AM IST
  • Facebook
  • Twitter
  • Whatsapp

ಬೆಂಗಳೂರು (ಅ. 01):  ಬೆಂಗಳೂರಿನಲ್ಲಿ ಧರ್ಮ ಗುರು ದಲೈ ಲಾಮ ಹತ್ಯೆಗೆ ಸ್ಕೆಚ್ ಹಾಕಲಾಗಿದೆ ಎಂದು ಬೋಧಗಯಾ ಸ್ಫೋಟದ ಆರೋಪಿಗಳಿಂದ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. 

ಬೋಧಗಯಾ ಸ್ಫೋಟದ ಪ್ರಮುಖ ಆರೋಪಿ ರಾಮನಗರದಲ್ಲಿ ಬಂಧಿತನಾಗಿದ್ದ. ಜಹಿದ್ದೀಲ್ ಇಸ್ಲಾಂ  ಅಲಿಯಾಸ್ ಮುನೀರ್ ಎಂಬಾತನನ್ನು ಬಂಧಿಸಲಾಗಿತ್ತು. ನಂತರ ಬೆಂಗಳೂರಿನಲ್ಲಿ ಅದಿಲ್‌ಎಂಬಾತನನ್ನು ಬಂಧಿಸಲಾಗಿತ್ತು.  ಮುನೀರ್ ಜಮಾತ್ ಮುಜಾಹೀದ್ದೀನ್ ಬಾಂಗ್ಲಾದೇಶ್ ಉಗ್ರ ಸಂಘಟನೆಯವನು. ಇವನು  ಬಂಧನಕ್ಕೂ ಮುಂಚೆ ನಾಲ್ಕು ವರ್ಷ ಬೆಂಗಳೂರಿನಲ್ಲಿ ವಾಸವಾಗಿದ್ದ.  ಈ ವೇಳೆ ದಲೈಲಾಮ ಮುಗಿಸಲು ಸ್ಕೆಚ್ ರೆಡಿ ಮಾಡಿದ್ದ.  ಬೋಧಗಯಾ ವಿಚಾರಣೆ ವೇಳೆ ಸ್ಕೆಚ್ ನ ಬಗ್ಗೆ ಜಹೀದ್ದೀಲ್ ಇಸ್ಲಾಂ ಬಾಯಿ ಬಿಟ್ಟಿದ್ದ. 

ಈಗಾಗಲೇ ಸ್ಫೋಟದ ಎನ್ ಐಎ ಚಾರ್ಜ್ ಶೀಟ್ ಸಲ್ಲಿಸಿದೆ.  ಈ ಕುರಿತು ಕರ್ನಾಟಕ ಡಿಜಿ ಐ ಜಿಪಿಗೂ‌  ಎನ್ ಐ ಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದರು. 
 

Follow Us:
Download App:
  • android
  • ios