ಒಂದು ವೇಳೆ ಜಿಂದಾಲ್ ಆಯ್ಕೆಯಾದಲ್ಲಿ, ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಪ್ರಥಮ ಭಾರತೀಯ ಅಮೆರಿಕದವರು ಎಂಬ ದಾಖಲೆ ನಿರ್ಮಿಸಲಿದ್ದಾರೆ.
ಲೂಸಿಯಾನದಲ್ಲಿ ಎರಡು ಬಾರಿ ಗವರ್ನರ್ ಆಗಿದ್ದ ಭಾರತೀಯ ಮೂಲದ ಬಾಬಿ ಜಿಂದಾಲ್, ನೂತನ ಟ್ರಂಪ್ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯುವುದು ಬಹುತೇಕ ಖಚಿತಗೊಂಡಿದೆ. ಒಂದು ವೇಳೆ ಜಿಂದಾಲ್ ಆಯ್ಕೆಯಾದಲ್ಲಿ, ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಪ್ರಥಮ ಭಾರತೀಯ ಅಮೆರಿಕದವರು ಎಂಬ ದಾಖಲೆ ನಿರ್ಮಿಸಲಿದ್ದಾರೆ. ಇನ್ನೊಂದೆಡೆಯಲ್ಲಿ ಟ್ರಂಪ್ ಆಯ್ಕೆ ಮಾಡಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಪಟ್ಟಿಯಲ್ಲಿ ಭಾರತೀಯ ಮೂಲದ ಅಮುಲ್ ಥಾಪರ್ ಹೆಸರು ಕೂಡ ಇದೆ ಎಂದು ವರದಿಯಾಗಿದೆ. ಸದ್ಯ ಅವರು ಈಶಾನ್ಯ ಕೆಂಟಕಿ ಜಿಲ್ಲೆಯ ನ್ಯಾಯಾಧೀಶರಾಗಿದ್ದಾರೆ.
