ಭೋಪಲ್[ಸೆ.13]: ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಗಣೇಶ ವಿಸರ್ಜಿಸಲು ಕಟ್ಲಾಪುರ ನಾಲೆಗೆ ತೆರಳಿದ್ದ 11 ಮಂದಿ ಜಲ ಸಮಾಧಿಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ 11 ಶವ ಪತ್ತೆಯಗಿದ್ದು, 6 ಮಂದಿಯನ್ನು ರಕ್ಷಿಸಲಾಗಿದೆ.

ಕಪ್ಪೆಗಳ ಭಾವನೆ ಕಸಿದ ಮೂಢನಂಬಿಕೆ: ಮದುವೆಯಾದ 2 ತಿಂಗಳಿಗೇ ವಿಚ್ಚೇದನ ಮಾಡ್ಸಿದ್ರು!

ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೋಪಾಲ್ ನಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಕಟಡ್ಲಾಪುರ ಕೆರೆಯಲ್ಲೂ ನೀರಿನ ಪ್ರಮಾಣ ಹೆಚ್ಚಾಗಿತ್ತು. ಹೀಗಿದ್ದರೂ ತುಂಬಿದ ಕೆರೆ ಮಧ್ಯೆ ಗಣೇಶ ವಿಸರ್ಜನೆಗೆ ತೆರಳಿದ್ದಾರೆ. ಅದರೆ ನೀರಿನ ಪ್ರಮಾಣ ಹೆಚ್ಚಾಗಿದ್ದು ನಿಯಂತ್ರಣ ಕಳೆದುಕೊಂಡ ದೋಣಿ ಅರ್ಧದಲ್ಲೇ ಮಗುಚಿದೆ. ಗಣೇಶ ಮೂರ್ತಿ ಹಿಡಿದು ಕುಳಿತಿದ್ದವರೆಲ್ಲಾ ಕೆರೆಗೆ ಬಿದ್ದಿದ್ದಾರೆ.

ದೋಣಿಯಲ್ಲಿ ಒಟ್ಟು 19 ಮಂದಿ ಇದ್ದು, ಇವರೆಲ್ಲಾ ಪಿಪ್ಲನಿ ಪ್ರದೆಶದವರೆಂಬ ಮಾಹಿತಿ ಲಭ್ಯವಾಗಿದೆ. ಗಣೇಶ ಮೂರ್ತಿಯನ್ನು ಕ್ರೇನ್ ಸಹಾಯದಿಂದ ಕೆರೆಯಲ್ಲಿ ವಿಸರ್ಜಿಸಲು ಮುಂದಾಗಿದ್ದರು. ಈ ವೇಳೆ 19 ಮಂದಿ ದೋಣಿಯಲ್ಲಿ ಕುಳಿತು ಕ್ರೇನ್ ಮೂಲಕ ಮೂರ್ತಿಯನ್ನು ಕೆರೆ ಮಧ್ಯೆ ಕೊಂಡೊಯ್ಯುತ್ತಿದ್ದರು. ದುರಾದೃಷ್ಟವಶಾತ್ ವಿಘ್ನ ನಿವಾರಕನನ್ನು ವಿಸರ್ಜಿಸುವ ಮೊದಲೇ ಇಂತಹುದ್ದೊಂದು ಭಾರೀ ದುರಂತ ಸಂಭವಿಸಿದೆ. 

ಮಾಹಿತಿ ಪಡೆಯುತ್ತಿದ್ದಂತೆಯೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. 6 ಮಂದಿಯಲ್ಲಿ ರಕ್ಷಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆದರೆ ಕೆರೆ ತುಂಬ ಆಳವಾಗಿದ್ದ ಪರಿಣಾಮ 11 ಮಂದಿ ಜಲ ಸಮಾಧಿಯಾಗಿದ್ದಾರೆ. 

ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಘಟನೆಯ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಅಲ್ಲದೇ ತೊಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಭರವಸೆ ನೀಡಿದ್ದಾರೆ ಹಾಗೂ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ