ಬಿಎಂಟಿಸಿ ಸಿಲಿಕಾನ್ ಸಿಟಿ ಬೆಂಗಳೂರಿನ ನರನಾಡಿ. ಆದರೆ ಇದೇ ಬಿಎಂಟಿಸಿ ಬಸ್ಗಳಿಗೆ ಕಿಲ್ಲರ್ ಬಿಎಂಟಿಸಿ ಎಂಬ ಕುಖ್ಯಾತಿಯೂ ಇದೆ. ಬಹುತೇಕ ಬಾರಿ ಬಿಎಂಟಿಸಿ ಬಸ್ಗಳ ಅಪಘಾತಕ್ಕೆ ಚಾಲಕರನ್ನು ಹೊಣೆ ಮಾಡಲಾಗುತ್ತೆ ಆದ್ರೆ ದುರಂತಗಳು ಸಂಭವಿಸುವುದ ಹಿಂದೆ ಕಾಣದ ಕೈಗಳಿವೆ. ಆ ಕರಳಮುಖ ಸುವರ್ಣನ್ಯೂಸ್ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಆ EXVCLUSIVE ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು(ಸೆ.14): ಎದೆ ಝಲ್ ಎನಿಸುವ ಈ ಅಪಘಾತಗಳೇ ಬಿಎಂಟಿಸಿ ಬಸ್ಗಳಿಗೆ ಕಿಲ್ಲರ್ ಎಂಬ ಹಣೆ ಪಟ್ಟಿಯನ್ನು ಕೊಟ್ಟಿವೆ. ಬ್ರೇಕ್ ಫೇಲ್, ಅಗ್ನಿ ಅವಘಡ, ಅಪಘಾತಗಳಿಗೆ ಅದೆಷ್ಟೋ ಪ್ರಯಾಣಿಕರು, ಪಾದಚಾರಿಗಳು ಬಲಿಯಾಗಿ ಹೋಗಿದ್ದಾರೆ. ಈ ದುರಂತಗಳ ಹಿಂದೆ ಇರೋದು ಭ್ರಷ್ಟಚಾರ. ಭಷ್ಟ್ರ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕರು ಪ್ರಾಣ ತೆತ್ತುತ್ತಿದ್ದಾರೆ. ದಿನ ಒಂದಕ್ಕೇ ಹತ್ತರಿಂದ ಹದಿನೈದು ರಸ್ತೆ ಅಪಘಾತಗಳು ಸಂಭವಿಸುತ್ತವೆ ಅಂದರೆ ನೀವು ನಂಬಲೇಬೇಕು.
ತಪಾಸಣೆ ಆಗದೆಯೇ ರಸ್ತೆಗಿಳಿಯುತ್ತಿವೆ ಕಿಲ್ಲರ್ BMTC ಬಸ್ಗಳು!
BMTC ಬಸ್ಗಳ ವಾಹನ ಪರೀಕ್ಷಕ ಹಾಗೂ ಘಟಕ ವ್ಯವಸ್ಥಾಪಕರ ನಿರ್ಲಕ್ಷ್ಯದಿಂದಲೇ ಬಿಎಂಟಿಸಿ ಬಸ್ಗಳು ಕಿಲ್ಲರ್ ಹಣೆಪಟ್ಟಿ ಹೊತ್ತಿವೆ. ಆಯಾ ಡಿಪೋಗಳ ವಾಹನ ಪರೀಕ್ಷಕರು, ಬಸ್ ದುರಸ್ತಿಗೊಳಿಸಿದ ಅಧಿಕಾರಿ ಹಾಗೂ ಘಟಕ ವ್ಯವಸ್ಥಾಪಕ ಬಸ್ನ ಪರಿಶೀಲಿಸಿ, ಲಾಗ್ ಬುಕ್ಗೆ ಸಹಿ ಹಾಕಿ ನಂತರವಷ್ಟೇ ಬಸ್ ರಸ್ತೆಗೆ ಇಳಿಸಬೇಕು. ಆದ್ರೆ, ಇವತ್ತು ಬೆಂಗಳೂರಿನಲ್ಲಿ ಓಡಾಡೋ ಯಾವ ಬಿಎಂಟಿಸಿ ಬಸ್ನಲ್ಲೂ ಈ ಮೂವರು ಸಹಿ ಹಾಕಿರುವ ಲಾಗ್ ಶೀಟ್ ಇಲ್ಲ. ಲಾಗ್ ಶಿಟ್ ಇದ್ರೂ ಅದರಲ್ಲಿ ಇವರ ಸಹಿ ಇರುವುದಿಲ್ಲ. ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್'ನಲ್ಲಿ ಡಿಪೋ ಅಧಿಕಾರಿಗಳ ಅಸಲಿಯತ್ತು ಹೊರ ಬಿದ್ದಿದೆ.
ಡಿಪೋ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೇಲಿಂದ ಮೇಲೆ ದುರಂತಗಳು ಸಂಭವಿಸಿ ಅಮಾಯಕರು ಬಲಿಯಾಗುತ್ತಿದ್ದಾರೆ. ಈಗ್ಲಾದ್ರೂ ಸಾರಿಗೆ ಸಚಿವರು ಎಚ್ಚೆತ್ತು ತಮ್ಮ ಇಲಾಖೆಯಲ್ಲಿ ಆಗುತ್ತಿರುವ ಭ್ರಷ್ಟಾಚಾರ, ಅವ್ಯವಸ್ಥೆಯನ್ನ ಸರಿಪಡಿಸಬೇಕಿದೆ. ಇಲ್ಲವಾದಲ್ಲಿ BMTC ಬಸ್ ಹತ್ತುವ ಮುನ್ನ ಎಚ್ಚರ.
