ಪ್ರಾಮಾಣಿಕತೆ ಮೆರೆದ ಬಿಎಂಟಿಸಿಯ ಡ್ರೈವರ್ ಹಾಗೂ ಕಂಡಕ್ಟರ್

news | Tuesday, April 10th, 2018
Suvarna Web Desk
Highlights

ಪ್ರಯಾಣಿಕರಿಗೆ ಸೇರಿದ 5 ಲಕ್ಷದ ಚಕ್ ಮತ್ತು ಮನೆ ದಾಖಲಾತಿಯನ್ನು ಸಂಬಂಧಿಸಿದವರಿಗೆ ತಲುಪಿಸಿ ಬಿಎಂಟಿಸಿ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಬೆಂಗಳೂರು : ಪ್ರಯಾಣಿಕರಿಗೆ ಸೇರಿದ 5 ಲಕ್ಷದ ಚಕ್ ಮತ್ತು ಮನೆ ದಾಖಲಾತಿಯನ್ನು ಸಂಬಂಧಿಸಿದವರಿಗೆ ತಲುಪಿಸಿ ಬಿಎಂಟಿಸಿ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಚಂದಾಪುರ ಡಿಪೋಗೆ ಸೇರಿದ ಬಿಎಂಟಿಸಿ ಸಿಬ್ಬಂದಿಯಿಂದ ಇಂತಹ ಜನ ಸ್ನೇಹಿ ಕಾರ್ಯ ನಡೆದಿದೆ.  ವಾಲ್ಟರ್ ಮೆಸ್ಕ್ಯೂರೆನ್ ಎಂಬುವರಿಗೆ ಸೇರಿದ 5 ಲಕ್ಷ ರೂ. ಚೆಕ್ ಮತ್ತು ಮನೆ ದಾಖಲಾತಿಗಳನ್ನು ಹಿಂದಿರುಗಿಸಲಾಗಿದೆ

ಇಂದು ಬೆಳಗ್ಗೆ ಬಸ್ ನಲ್ಲಿ ದಾಖಲಾತಿ ಹಾಗೂ ಹಣದ ಚೆಕ್’ನ್ನು ಅವರು ಬಿಟ್ಟು ಹೋಗಿದ್ದರು.  ಮಧ್ಯಾಹ್ನದ ಹೊತ್ತಿಗೆ ಬಿಎಂಟಿಸಿ ಸಿಬ್ಬಂದಿ ಈ ಎಲ್ಲಾ ವಸ್ತುಗಳನ್ನೂ ಕೂಡ ವಾಪಸ್ಸುನೀಡಿದ್ದಾರೆ.

ಕಂಡಕ್ಟರ್ ನಬಿಲಾಲ್, ಡ್ರೈವರ್ ಸುಬ್ರಹ್ಮಣಿ ಅವರು ಇಂತಹ ಕಾರ್ಯ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 ಚಂದಾಪುರದಿಂದ ಹೊರಟ ಬಸ್ ನಲ್ಲಿ ಎಲೆಕ್ಟ್ರಾನಿಕ್ ಸಿಟಿ ಬಳಿ ದಾಖಲಾತಿ ಪತ್ತೆಯಾಗಿದ್ದು, ದಾಖಲಾತಿ ಕಂಡ ತಕ್ಷಣ ಡಿಪೋ ಮ್ಯಾನೇಜರ್’ಗೆ ಈ ಬಗ್ಗೆ  ಮಾಹಿತಿ ನೀಡಿದ್ದಾರೆ.

ಬಿಎಂಟಿಸಿ ಸಿಬ್ಬಂದಿಯಿಂದ ತಕ್ಷಣ ದಾಖಲಾತಿ ತರಿಸಿಕೊಂಡ ಮ್ಯಾನೇಜರ್ ಸಂಬಂಧಿಸಿದವರಿಗೆ ಬ್ಯಾಂಕ್ ಮೂಲಕ ಸಂಪರ್ಕಿಸಿ ದಾಖಲಾತಿ ವಾಪಸ್ಸು ನೀಡಿದ್ದಾರೆ.

Comments 0
Add Comment

    Related Posts

    Drunk BMTC Driver Hits Car

    video | Wednesday, March 21st, 2018

    Different Protest Against In Nelamangala

    video | Sunday, March 4th, 2018

    Rain Havoc in Haveri Auto Driver Killed

    video | Wednesday, October 4th, 2017

    shikhar dhawan auto driver

    sports | Friday, August 18th, 2017

    Drunk BMTC Driver Hits Car

    video | Wednesday, March 21st, 2018
    Suvarna Web Desk