ಅಂತೂ ಇಂತೂ ಬಿಎಂಟಿಸಿ ನಿಗಮ ಎಚ್ಚೆತ್ತುಕೊಂಡಿದೆ. ಪದೇ ಪದೇ ಬಿಎಂಟಿಸಿ ಬಸ್​ಗಳಿಂದ ಆಗುತ್ತಿರುವ ಅವಘಡ, ಮುಖಭಂಗವನ್ನು ತಪ್ಪಿಸಿಕೊಳ್ಳಲು ಬಿಎಂಟಿಸಿ ನಿಗಮ ಮುಂದಾಗಿದೆ.

ಬೆಂಗಳೂರು(ಸೆ.20): ಅಂತೂ ಇಂತೂ ಬಿಎಂಟಿಸಿ ನಿಗಮ ಎಚ್ಚೆತ್ತುಕೊಂಡಿದೆ. ಪದೇ ಪದೇ ಬಿಎಂಟಿಸಿ ಬಸ್​ಗಳಿಂದ ಆಗುತ್ತಿರುವ ಅವಘಡ, ಮುಖಭಂಗವನ್ನು ತಪ್ಪಿಸಿಕೊಳ್ಳಲು ಬಿಎಂಟಿಸಿ ನಿಗಮ ಮುಂದಾಗಿದೆ.

ಕಳೆದ ತಿಂಗಳು ನಗರದ ಪೀಣ್ಯ ಬಳಿ ವೇಗವಾಗಿ ಹೋಗುತ್ತಿದ ಬಸ್'​ನ ಚಕ್ರ ಕಳಚಿ ಬಿದ್ದು ಕೂದಲಂತರದಲ್ಲಿ ಭಾರಿ ಅನಾಹುತ ತಪ್ಪಿತ್ತು. ಅಷ್ಟೇ ಅಲ್ಲದೆ ಸ್ವತಃ ಸಿಎಂ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ 2 ಬಸ್​ಗಳು ಮಾರ್ಗ ಮಧ್ಯೆಯೇ ಕೈಕೊಟ್ಟು ಭಾರಿ ಸುದ್ದಿಯಾಗಿತ್ತು. ಇದಾದ ಬಳಿಕ ನಿನ್ನೆ ಸಹ ವೇಗವಾಗಿ ಚಲಿಸುತ್ತಿದ ಬಿಎಂಟಿಸಿ ಬಸ್'​ನ​ ಚಕ್ರ ಕಳಚಿದೆ. ಅಷ್ಟೇ ಅಲ್ಲದೆ ಹಳೆಯ ಬಸ್​'ಗಳಿಂದ ಬಿಎಂಟಿಸಿ ಡ್ರೈವರ್​ ಹಾಗೂ ಪ್ರಯಾಣಿಕರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಹಾಗೂ ಇದಕ್ಕೆಲ್ಲ ಕಾರಣ ಏನು? ಎಂಬುದರ ಬಗ್ಗೆ ಸುವರ್ಣನ್ಯೂಸ್​ ವಿಸ್ತೃತ ಸುದ್ದಿ ಪ್ರಸಾರ ಮಾಡಿತ್ತು.

ಇದರಿಂದ ಎಚ್ಚೆತ್ತುಕೊಂಡಿರುವ ಬಿಎಂಟಿಸಿ ನಿಗಮ, 8 ವರ್ಷ ಪೂರೈಸಿರುವ ಬಿಎಂಟಿಸಿ ಬಸ್'​ಗಳನ್ನ ರಸ್ತೆಗೆ ಇಳಿಸದಿರಲು ಮುಂದಾಗಿದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬಿಎಂಟಿಸಿ ಬಸ್'​ಗಳು ಎಂಟು ವರ್ಷ ಪೂರೈಸಿದ್ದು , ಅವುಗಳನ್ನ ಹಂತ ಹಂತವಾಗಿ ಗುಜುರಿಗೆ ಹಾಕಲು ಬಿಎಂಟಿಸಿ ಮುಂದಾಗಿದೆ.

ಇದರ ಬಗ್ಗೆ ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್​ ಸುವರ್ಣನ್ಯೂಸ್​'ಗೆ ಅಧಿಕೃತ ಮಾಹಿತಿ ನೀಡಿದ್ದು, ಇದು ಸುವರ್ಣನ್ಯೂಸ್​ ವರದಿಯ ಫಲಶೃತಿಯಾಗಿದೆ.