Asianet Suvarna News Asianet Suvarna News

ಮಹಿಳಾ ಸುರಕ್ಷತೆಗೆ ಬಿಎಂಟಿಸಿಯಲ್ಲಿ ಶುರುವಾಗಿದೆ 'ದುರ್ಗಾ ಅಲಾರಾಂ'

ಭಾರತದಲ್ಲಿ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಪ್ರಮಾಣ ಹೆಚ್ಚಾಗಿದೆ. 2014 ರಲ್ಲಿ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ, ಶೇ. 77 ರಷ್ಟು 15-19 ವರ್ಷದೊಳಗಿನ ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಬೆಂಗಳೂರು ಒಂದರಲ್ಲೇ ಹೆಣ್ಣು ಮಕ್ಕಳ, ಚಿಕ್ಕ ಮಕ್ಕಳ ಮೇಲಿನ ದೌರ್ಜನ್ಯ ಗಣನೀಯವಾಗಿ ಹೆಚ್ಚಾಗಿದೆ.

BMTC buses to get safer with the Durga alarm

ಬೆಂಗಳೂರು (ನ.05): ಭಾರತದಲ್ಲಿ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಪ್ರಮಾಣ ಹೆಚ್ಚಾಗಿದೆ. 2014 ರಲ್ಲಿ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ, ಶೇ. 77 ರಷ್ಟು 15-19 ವರ್ಷದೊಳಗಿನ ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಬೆಂಗಳೂರು ಒಂದರಲ್ಲೇ ಹೆಣ್ಣು ಮಕ್ಕಳ, ಚಿಕ್ಕ ಮಕ್ಕಳ ಮೇಲಿನ ದೌರ್ಜನ್ಯ ಗಣನೀಯವಾಗಿ ಹೆಚ್ಚಾಗಿದೆ.

ಮಹಿಳೆಯರ ಮೇಲಿನ ಲೈಂಗಿಕ  ದೌರ್ಜನ್ಯ, ಕಿರುಕುಳ ತಡೆಗಟ್ಟುವ ನಿಟ್ಟಿನಲ್ಲಿ ದುರ್ಗಾ ಸಂಸ್ಥೆ ಶ್ರಮಿಸುತ್ತಿದೆ. ಅನೇಕ ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡಿದೆ. ಮಹಿಳೆಯರಿಗೆ ತಮ್ಮ ಸುರಕ್ಷತೆಯನ್ನು ಹೇಗೆ ಮಾಡಿಕೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು, ತೊಂದರೆಯಾದಾಗ ಏನು ಮಾಡಬೇಕು ಇವೆಲ್ಲದರ ಬಗ್ಗೆ ಕಾರ್ಯಾಗಾರಗಳಲ್ಲಿ ಜನಜಾಗೃತಿ ಮೂಡಿಸುತ್ತಿದೆ. ಇದರ ಒಂದು ಭಾಗವಾಗಿ ದುರ್ಗಾ ಸಂಸ್ಥೆ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಸಾರ್ವಜನಿಕ ಸಾರಿಗೆಗಳಲ್ಲಿ ದುರ್ಗಾ ಅಲಾರಾಂನ್ನು ಜಾರಿಗೆ ತಂದಿದೆ. ಅಂದು ಸಾರಿಗೆ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಇದಕ್ಕೆ ಚಾಲನೆ ನೀಡಿದ್ದರು.

ಹೇಗೆ ಕೆಲಸ ಮಾಡುತ್ತದೆ ಅಲಾರಾಂ?

ಕೆಲವು ಆಯ್ದ ಬಸ್'ಗಳಲ್ಲಿ ಈ ಅಲಾರಾಂನ್ನು ಅಳವಡಿಸಲಾಗಿದೆ. ಎಲ್ಲರಿಗೂ ಇದು ಸುಲಭವಾಗಿ ಅರ್ಥವಾಗಲು ಸ್ಕ್ರೀನ್ ಮೇಲೆ ಡಿಸ್ಪ್ಲೇ ಆಗುತ್ತಿರುತ್ತದೆ. ಬಸ್ಸಿನ ಕಿಟಕಿ ಬದಿಯಲ್ಲಿ, ಅಲ್ಲಲ್ಲಿ ಎಲ್ಲರಿಗೂ ಎಟುಕುವಂತೆ ಸ್ವಿಚ್ಚನ್ನು ಅಳವಡಿಸಿರಲಾಗುತ್ತದೆ. ಒಂದು ವೇಳೆ ಮಹಿಳೆಯರ, ಮಕ್ಕಳ ಮೇಲೆ ಯಾರಾದರೂ ಕಿರುಕುಳ ನೀಡಿದರೆ, ದೌರ್ಜನ್ಯವೆಸಗಿದರೆ ಈ ಸ್ವಿಚ್ಚನ್ನು ಒತ್ತಿದರಾಯಿತು. ಆಗ ಅಲಾರಾಂ ಕಾರ್ಯಗತವಾಗುತ್ತದೆ. ಬಸ್ಸಿನ ಒಳಗಿರುವವರಿಗೂ, ಹೊರಗಿರುವವರಿಗೂ ಅಲಾರಾಂ ಸದ್ದು ಕೇಳಿಸುತ್ತದೆ. 20 ಸೆಕೆಂಡ್'ಗಳವರೆಗೆ ಅಲಾರಾಂ ಬಡಿದುಕೊಳ್ಳುತ್ತದೆ. ಆಗ ಡ್ರೈವರ್ ಬಸ್ಸನ್ನು ಕಡ್ಡಾಯವಾಗಿ ನಿಲ್ಲಿಸಿ ಅಲಾರಾಂ ಸ್ವಿಚ್ಚನ್ನು ಆಫ್ ಮಾಡಬೇಕು. ಇಲ್ಲದಿದ್ದರೆ ಪ್ರತಿ 10 ಸೆಕೆಂಡ್'ಗೆ ಬಡಿದುಕೊಳ್ಳುತ್ತದೆ. ಬಸ್ಸಿನ ಒಳಗೆ, ಹೊರಗೆ ಫ್ಲಾಶ್ ಬರುತ್ತದೆ. ಇದು ಪೊಲೀಸರನ್ನು, ಸಾರ್ವಜನಿಕರಿಗೆ ಸೂಚನೆ ಕೊಡುತ್ತದೆ,

ದುರ್ಗಾ ಸಂಸ್ಥೆಯ ಸಂಸ್ಥಾಪಕಿ, ಪ್ರಿಯಾ ವರದರಾಜನ್ ಹೇಳುವಂತೆ, ಶೇ.99 ರಷ್ಟು ಮಹಿಳೆಯರು ಸಾರ್ವಜನಿಕ ಸಾರಿಗೆಗಳಲ್ಲಿ ಒಂದಲ್ಲಾ ಒಂದು ರೀತಿ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಆದರೆ ಅದನ್ನು ಎಷ್ಟೋ ಸಂದರ್ಭದಲ್ಲಿ ಹೇಳಲು ಆಗುವುದಿಲ್ಲ. ಯಾರು ಏನು ಅಂದುಕೊಳ್ಳುತ್ತಾರೆ ಎಂದು ಸುಮ್ಮನಿರುತ್ತಾರೆ. ಇಂತಹ ಸಂದರ್ಭದಲ್ಲಿ ಅಲಾರಾಂ ಸಹಾಯಕ್ಕೆ ಬರುತ್ತದೆ. ಹೆದರುವ ಅಗತ್ಯ ಇರುವುದಿಲ್ಲ. ಅಲಾರಾಂ ಸ್ವಿಚ್ ಒತ್ತಿದರಾಯಿತು. ಇದು ಡ್ರೈವರ್, ಕಂಡಕ್ಟರ್, ಸಹ ಪ್ರಯಾಣಿಕರು ಎಲ್ಲರ ಗಮನಕ್ಕೆ ತರಲು ಸಹಾಯಕವಾಗುತ್ತದೆ.

ಸದ್ಯಕ್ಕೆ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚರಿಸುವ ಈ ನಂಬರ್ ಬಸ್'ಗಳಲ್ಲಿ ಅಲಾರಾಂ ಅನ್ನು ಅಳವಡಿಸಲಾಗಿದೆ.

ರೂಟ್ ನಂ: 238U- ಅಂಬೇಡ್ಕರ್ ಕಾಲೇಜಿನಿಂದ ಮೆಜೆಸ್ಟಿಕ್

ರೂಟ್ ನಂ: TR12- ಶ್ರೀನಗರದಿಂದ ಬಸವೇಶ್ವರ ನಗರ

ರೂಟ್ ನಂ: 18: ಜಯನಗರ 9 ಬ್ಲಾಕ್'ನಿಂದ ಮೆಜೆಸ್ಟಿಕ್

ರೂಟ್ ನಂ:  401R: ಬಿಇಎಂಎಲ್ 5 ನೇ ಹಂತದಿಂದ ಯಲಹಂಕ

ರೂಟ್ ನಂ: 27E- ಶಿವಾಜಿನಗರದಿಂದ ಜೆಪಿ ನಗರ  

Follow Us:
Download App:
  • android
  • ios