ಅಂತೂ ಇಂತೂ ಬಿಎಂಟಿಸಿ ನಿಗಮ ಎಚ್ಚೆತ್ತುಕೊಂಡಿದೆ. ಪದೇ ಪದೇ ಬಿಎಂಟಿಸಿ ಬಸ್ಗಳಿಂದ ಆಗುತ್ತಿರುವ ಮುಖಭಂಗವನ್ನ ತಪ್ಪಿಸಿಕೊಳ್ಳಲು ಬಿಎಂಟಿಸಿ ನಿಗಮ ಮುಂದಾಗಿದೆ.
ಬೆಂಗಳೂರು (ಸೆ.19): ಅಂತೂ ಇಂತೂ ಬಿಎಂಟಿಸಿ ನಿಗಮ ಎಚ್ಚೆತ್ತುಕೊಂಡಿದೆ. ಪದೇ ಪದೇ ಬಿಎಂಟಿಸಿ ಬಸ್ಗಳಿಂದ ಆಗುತ್ತಿರುವ ಮುಖಭಂಗವನ್ನ ತಪ್ಪಿಸಿಕೊಳ್ಳಲು ಬಿಎಂಟಿಸಿ ನಿಗಮ ಮುಂದಾಗಿದೆ.
ಕಳೆದ ತಿಂಗಳು ಪೀಣ್ಯಾ ಬಳಿ ವೇಗವಾಗಿ ಹೋಗುತ್ತಿದ್ದ ಬಸ್ನ ಚಕ್ರ ಕಳಚಿ ಬಿದ್ದ ಘಟನೆ ನಡೆದಿತ್ತು, ಅಷ್ಟೇ ಅಲ್ಲದೆ ಸಿಎಂ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಬಸ್ ಕೂಡಾ ಮಾರ್ಗ ಮಧ್ಯೆಯೇ ಕೈಕೊಟ್ಟಿತ್ತು. ಇದಕ್ಕೆ ಕಾರಣ ಏನು ಎಂಬುವುದರ ಬಗ್ಗೆ ಸುವರ್ಣನ್ಯೂಸ್ ಸವಿಸ್ತಾರವಾದ ಸುದ್ದಿಯನ್ನ ಪ್ರಸಾರ ಮಾಡಿತ್ತು . ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಬಿಎಂಟಿಸಿ ನಿಗಮ ಎಂಟು ವರ್ಷ ಪೂರೈಸಿದ ಬಿಎಂಟಿಸಿ ಬಸ್ಗಳನ್ನ ರಸ್ತೆಗೆ ಇಳಿಸದಿರಲು ಬಿಎಂಟಿಸಿ ಮುಂದಾಗಿದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬಿಎಂಟಿಸಿ ಬಸ್ಗಳು ಎಂಟು ವರ್ಷ ಪೂರೈಸಿದ್ದು ಅವುಗಳನ್ನ ಗುಜರಿಗೆ ಹಾಕಲು ಬಿಎಂಟಿಸಿ ಮುಂದಾಗಿದೆ. ಇದು ಸುವರ್ಣನ್ಯೂಸ್ ಇಂಪ್ಯಾಕ್ಟ್!
ವೇಗವಾಗಿ ಚಲಿಸುತ್ತಿದ್ದ ಬಸ್ ಚಕ್ರ ಕಳಚಿ ಬಿದ್ದು ಕೂದಲಂತರದಲ್ಲಿ ಭಾರಿ ಅವಘಡ ತಪ್ಪಿತ್ತು, ಇದಾದ ನಂತರ ನಿನ್ನೆ ಕೂಡಾ ವೇಗವಾಗಿ ಚಲಿಸುತ್ತಿದ್ದ ಬಸ್ ಚಕ್ರ ಕಳಚಿದೆ. ಹೀಗಾಗಿ ಇನ್ಮುಂದೆ ಎಂಟು ವರ್ಷಕ್ಕಿಂತ ಮೇಲ್ಪಟ್ಟ ಬಸ್ಗಳನ್ನ ರಸ್ತೆಗೆ ಇಳಿಸುವುದಿಲ್ಲ ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್ ಸುವರ್ಣನ್ಯೂಸ್ಗೆ ತಿಳಿಸಿದ್ದಾರೆ..
