ಬಸ್ ಚಲಿಸುತ್ತಿದ್ದ ಸಂದರ್ಭ ಇಳಿಯಲು ಯತ್ನಿಸಿದ ಯುವಕ, ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿಯನ್ನ 18 ವರ್ಷದ ಹರೀಶ್ ಎಂದು ಗುರ್ತಿಸಲಾಗಿದೆ.

ಬೆಂಗಳೂರು(ಸೆ.01): ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿ ಸ್ಥಳದಲ್ಲೇ ಸಾವೀಗೀಡಾದ ದಾರುಣ ಘಟನೆ ಹೆಬ್ಬಗೋಡಿಯಲ್ಲಿ ನಡೆದಿದೆ. ಬಸ್ ಚಲಿಸುತ್ತಿದ್ದ ಸಂದರ್ಭ ಇಳಿಯಲು ಯತ್ನಿಸಿದ ಯುವಕ, ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿಯನ್ನ 18 ವರ್ಷದ ಹರೀಶ್ ಎಂದು ಗುರ್ತಿಸಲಾಗಿದೆ.

ಹೊಸೂರು ಮುಖ್ಯರಸ್ತೆಯ ಹೆಬ್ಬಗೋಡಿ ಬಸ್ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.