ಒಟ್ಟು 227 ಸ್ಥಾನಗಳಿಗೆ, 2,275 ಅಭ್ಯರ್ಥಿಗಳು ಕಣದಲ್ಲಿದ್ದು 92 ಲಕ್ಷ ಮತದಾರರನ್ನ ಹೊಂದಿದ್ದು. ಇನ್ನು 2ನೇ ಹಂತದ ಚುನಾವಣೆಯಲ್ಲಿ 11 ಜಿಲ್ಲಾ ಪರಿಷತ್ ಮತ್ತು 118 ಪಂಚಾಯಿತಿ ಸಮಿತಿಗಳಿಗೂ ಇಂದೇ ಮತದಾನ ನಡೆಯಿತು.
ಬಿರುಸಿನಿಂದ ನಡೆದ ಬೃಹತ್ ಮುಂಬೈ ಮಹಾನಗರ ಪಾಲಿಕೆಗಯ ಚುನಾವಣೆಯ ಮತದಾನ . ಮುಂಬೈ ಪಾಲಿಕೆಯ ಗದ್ದುಗೆಗೆ ಇಂದು ತುರುಸಿನ ಮತದಾನ ನಡೆಯಿತು. ಏಷ್ಯಾದ ಅತಿ ದೊಡ್ಡ ಸ್ಥಳೀಯ ಸಂಸ್ಥೆಯ ಆಡಳಿತವಾಗಿರುವ ಮುಂಬೈ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪರಿಷತ್ ಗೆ 2ನೇ ಹಂತದ ಚುನಾವನೆಗೆ ಮತದಾನವನ್ನ ನಡೆಯಿತು. ಒಟ್ಟು 227 ಸ್ಥಾನಗಳಿಗೆ, 2,275 ಅಭ್ಯರ್ಥಿಗಳು ಕಣದಲ್ಲಿದ್ದು 92 ಲಕ್ಷ ಮತದಾರರನ್ನ ಹೊಂದಿದ್ದು. ಇನ್ನು 2ನೇ ಹಂತದ ಚುನಾವಣೆಯಲ್ಲಿ 11 ಜಿಲ್ಲಾ ಪರಿಷತ್ ಮತ್ತು 118 ಪಂಚಾಯಿತಿ ಸಮಿತಿಗಳಿಗೂ ಇಂದೇ ಮತದಾನ ನಡೆಯಿತು. ಆಡಳಿತಾರೂಢ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಒಡಕು ಉಂಟಾಗಿರುವುದರಿಂದ ಈ ಚುನಾವಣೆ ಎರಡೂ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿದೆ.ಇನ್ನು ಹಿರಿಯ ರಾಜಕಾರಣಿಗಳು, ಬಾಲಿವುಡ್ ನಟ-ನಟಿಯರು, ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕೂಡ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ರು. ಬಿಜೆಪಿ ನಾಯಕಿ ಸೈನಾ ಸೈಕಲ್ ನಲ್ಲಿ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು.
