ಆತ್ಮಹತ್ಯೆಯ ಆಟವೆಂದೇ ಪ್ರಚಲಿತದಲ್ಲಿರುವ ಬ್ಲೂ ವೇಲ್ ಗೇಮ್ ಇದೀಗ ಕರಾವಳಿಗೂ ಕಾಲಿಟ್ಟಿದೆ. ಮಂಗಳೂರಿನ ಖಾಸಗಿ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿ ತಿಮಿಂಗಿಲು ಆಕಾರದಲ್ಲಿ ಕೈ ಕುಯ್ದುಕೊಂಡಿದ್ದಾನೆ.
ಮಂಗಳೂರು(ಸೆ.01): ಆತ್ಮಹತ್ಯೆಯ ಆಟವೆಂದೇ ಪ್ರಚಲಿತದಲ್ಲಿರುವ ಬ್ಲೂ ವೇಲ್ ಗೇಮ್ ಇದೀಗ ಕರಾವಳಿಗೂ ಕಾಲಿಟ್ಟಿದೆ. ಮಂಗಳೂರಿನ ಖಾಸಗಿ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿ ತಿಮಿಂಗಿಲು ಆಕಾರದಲ್ಲಿ ಕೈ ಕುಯ್ದುಕೊಂಡಿದ್ದಾನೆ.
ಯುವಕ ಬ್ಲೂ ವೇಲ್ ಗೇಮ್ನ ನಿಯಮದಂತೆ ಕೈ ಕುಯ್ದುಕೊಂಡಿದ್ದು, ಅವನ ಮೊಬೈಲ್'ನಲ್ಲಿ ಬ್ಲೂ ವೇಲ್ ಗೇಮ್ ಪತ್ತೆಯಾಗಿದೆ. ಶಿಕ್ಷಕರು ಹಾಗೂ ಪೋಷಕರಿಂದ ಮುಂದೆ ಆಗುವಂತಹ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಇನ್ನು ವಿದ್ಯಾರ್ಥಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
