ಭಾರತೀಯ ತನಿಖಾ ತಂಡವು ಗಡಿ ನಿಯಂತ್ರಣ ರೇಖೆ ಬಳಿ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು ಪಾಕಿಸ್ತಾನ ಸೈನಿಕರೇ ಭಾರತೀಯ ಸೈನಿಕರನ್ನು ಹತ್ಯೆಗೈದಿದ್ದು ಎಂದು ದೃಢಪಡಿಸಿದೆ.

ನವದೆಹಲಿ (ಮೇ.03): ಭಾರತೀಯ ತನಿಖಾ ತಂಡವು ಗಡಿ ನಿಯಂತ್ರಣ ರೇಖೆ ಬಳಿ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು ಪಾಕಿಸ್ತಾನ ಸೈನಿಕರೇ ಭಾರತೀಯ ಸೈನಿಕರನ್ನು ಹತ್ಯೆಗೈದಿದ್ದು ಎಂದು ದೃಢಪಡಿಸಿದೆ.

ಈ ವಿಚಾರವನ್ನು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಪಾಕಿಸ್ತಾನದ ಹೈ ಕಮಿಷನರ್ ಅಬ್ದುಲ್ ಬಸೀತ್ ಗೆ ಮಾಹಿತಿ ನೀಡಿದ್ದಾರೆ. ಆದರೆ ಅಬ್ದುಲ್ ಬಸೀತ್ ಇದನ್ನು ನಿರಾಕರಿಸಿದ್ದಾರೆ.

ಮೇ 01 ರಂದು ನಡೆದ ದಾಳಿಯಲ್ಲಿ ಪಾಕಿಸ್ತಾನದ ಸೇನೆಯೇ ನಮ್ಮ ಸೈನಿಕರನ್ನು ಹತ್ಯೆಗೈದಿದ್ದು ಎನ್ನುವುದಕ್ಕೆ ನಮ್ಮ ಬಳಿ ಸೂಕ್ತ ಪುರಾವೆಗಳಿವೆ. ರಕ್ತದ ಮಾದರಿಗಳನ್ನು ನಮ್ಮ ತನಿಖಾಗಾರರು ಸಂಗ್ರಹಿಸಿದ್ದಾರೆ ಎಂದು ವಿದೇಶಾಂಗ ವಕ್ತಾರ ಗೋಪಾಲ್ ಬಾಗ್ಲೆ ಹೇಳಿದ್ದಾರೆ.

ಇಂತದ್ದೊಂದು ಹೇಯ ಕೃತ್ಯಕ್ಕೆ ಹೊಣೆಯಾದ ಪಾಕಿಸ್ತಾನ ಸೇನೆ ಹಾಗೂ ಕಮಾಂಡರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರತ ಆಗ್ರಹಿಸಿದೆ.