ಅಂಧನಿಗೆ ಮನೆ ಇಲ್ಲವೆಂದು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಪ್ರಧಾನಮಂತ್ರಿ ಕಾರ್ಯಾಲಯದ ಕದ ತಟ್ಟಿದ ಪರಿಣಾಮ ಸಂತ್ರಸ್ತನಿಗೆ ಮನೆ ದೊರಕಿದೆ. ವಿಜಯಪುರ ಜಿಲ್ಲೆ ಇಂಚಿಗೇರಿ ಗ್ರಾಮದ ಕಾಶಿನಾಥ ಅಗಸರ ಎಂಬವರೇ ಸೂರು ಪಡೆದಿರುವ ವ್ಯಕ್ತಿ.

ವಿಜಯಪುರ(ಜು.31): ಅಂಧನಿಗೆ ಮನೆ ಇಲ್ಲವೆಂದು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಪ್ರಧಾನಮಂತ್ರಿ ಕಾರ್ಯಾಲಯದ ಕದ ತಟ್ಟಿದ ಪರಿಣಾಮ ಸಂತ್ರಸ್ತನಿಗೆ ಮನೆ ದೊರಕಿದೆ. ವಿಜಯಪುರ ಜಿಲ್ಲೆ ಇಂಚಿಗೇರಿ ಗ್ರಾಮದ ಕಾಶಿನಾಥ ಅಗಸರ ಎಂಬವರೇ ಸೂರು ಪಡೆದಿರುವ ವ್ಯಕ್ತಿ.

ಕಾಶಿನಾಥ ಅಗಸರ ಅವರಿಗೆ ದಶಕದ ಹಿಂದೆ ಅಂಧತ್ವ ಆವರಿಸಿದ್ದು ಇದರಿಂದ ಪತ್ನಿ ಹಾಗೂ ಮಕ್ಕಳು ಅವರನ್ನು ಬಿಟ್ಟು ಹೋಗಿದ್ದಾರೆ. ಆಗಿನಿಂದಲೂ ತನ್ನ ಒಂದು ಎಕರೆ ಹೊಲದಲ್ಲೇ ಸಣ್ಣ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿದ್ದ ಅವರು ತನಗೆ ಮನೆ ಕಟ್ಟಿಕೊಡಿ ಎಂದು ಗ್ರಾ.ಪಂ.ಗೆ ಮನವಿ ಮಾಡಿಕೊಂಡಿದ್ದರು. ಹಲವಾರು ಬಾರಿ ಪ್ರತಿ‘ಟಿಸಿದ್ದರೂ ಗ್ರಾ.ಪಂ. ಸ್ಪಂದಿಸಿರಲಿಲ್ಲ.

ಈ ಕುರಿತಂತೆ 2016ರಲ್ಲಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿದ್ದು ಆ ವರದಿಗಳನ್ನು ಒಟ್ಟುಗೂಡಿಸಿದ ಗ್ರಾಮದ ರವಿ ದೇವರ, ಗಿರೀಶ ಸಾತಲಗಾಂವ, ರಮೇಶ ಸಾತಲ ಗಾಂವ, ರಾಜು ಏಳಗಿ, ವಿಠ್ಠಲ ರಾಠೋಡ ಹಾಗೂ ಮಂಜು ಪರ್ವತಿ ಎಂಬ ಯುವಕರು ಪ್ರಧಾನಿ ಕಚೇರಿಗೆ ಕಳಿಸಿದ್ದರು. ಇದಕ್ಕೆ ಸ್ಪಂದಿಸಿದ ಪ್ರಧಾನಿ ಕಚೇರಿ ಈ ಕುರಿತಂತೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ, ಜಿಲ್ಲಾಡಳಿತ ತಾ.ಪಂ. ಗೆ, ತಾ.ಪಂ. ಗ್ರಾಮ ಪಂಚಾಯ್ತಿಗೆ ಪತ್ರ ಬರೆದು ಸೂರು ಕಲ್ಪಿಸುವಂತೆ ಸೂಚನೆ ನೀಡಿತ್ತು. ಅದರಂತೆ ಗ್ರಾಮ ಪಂಚಾ ಯತಿಯೂ ಕಳೆದ ಕೆಲ ತಿಂಗಳ ಹಿಂದೆ ಕಾಶಿನಾಥ ಅವರಿಗೆ ಬಸವ ವಸತಿ ಯೋಜನೆಯಡಿ ಸೂರು ಕಲ್ಪಿಸಲಾಗಿದೆ.