ಬಲ್ಗೇರಿಯಾದ ಬಾಬಾ ವಾಂಗ ಎಂಬ ಅಂಧ ಮಹಿಳೆ ಈ ಹಿಂದೆ ಹೇಳಿದ ಅನೇಕ ಭವಿಷ್ಯಗಳು ಸತ್ಯವಾಗಿದ್ದು, 2018ರಲ್ಲಿ ನಡೆಯುವ ಪ್ರಮುಖ ಘಟನೆಗಳ ಬಗ್ಗೆಯೂ ಆಕೆ ಭವಿಷ್ಯವನ್ನು ಹೇಳಿದ್ದಾರೆ.

ಬೆಂಗಳೂರು (ಡಿ.26): ಬಲ್ಗೇರಿಯಾದ ಬಾಬಾ ವಾಂಗ ಎಂಬ ಅಂಧ ಮಹಿಳೆ ಈ ಹಿಂದೆ ಹೇಳಿದ ಅನೇಕ ಭವಿಷ್ಯಗಳು ಸತ್ಯವಾಗಿದ್ದು, 2018ರಲ್ಲಿ ನಡೆಯುವ ಪ್ರಮುಖ ಘಟನೆಗಳ ಬಗ್ಗೆಯೂ ಆಕೆ ಭವಿಷ್ಯವನ್ನು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1996ರಲ್ಲಿ ತಮ್ಮ 85ನೇ ವರ್ಷಕ್ಕೆ ನಿಧನರಾದ ಈಕೆ ಜಗತ್ತಿನಲ್ಲಿ ಯಾವ ಕಾಲದಲ್ಲಿ ಏನಾಗುತ್ತದೆ ಎನ್ನುವ ಎಲ್ಲಾ ಭವಿಷ್ಯವನ್ನೂ ಕೂಡ ಹೇಳಿದ್ದಾರೆ. 2018ರಲ್ಲಿ 2 ಪ್ರಮುಖ ಘಟನೆಗಳು ಸಂಭವಿಸಲಿದೆ ಆಕೆ ಹೇಳಿದ್ದಾರೆ.

2018ಕ್ಕೆ ಚೀನಾ ವಿಶ್ವದ ಸೂಪರ್ ಪವರ್ ದೇಶವಾಗಲಿದೆ ಎಂದು ಹೇಳಿದ್ದಾರೆ. ಇನ್ನು ಶುಕ್ರದಲ್ಲಿ ಹೊಸದಾದ ಶಕ್ತಿಯ ಮೂಲವೊಂದರ ಸಂಶೋಧನೆ ನಡೆಯಲಿದೆ ಎಂದು ಹೇಳಿದ್ದಾರೆ.

ಚೀನಾದಲ್ಲಿ ಈ ಭವಿಷ್ಯ ಹೆಚ್ಚಿನ ಪ್ರಮಾಣದಲ್ಲಿ ನಿಜವಾಗುತ್ತಿದೆ. ಅದರ ಆರ್ಥಿಕ ಮಟ್ಟ ನಾಗಾಲೋಟದಲ್ಲಿ ಸಾಗುತ್ತಿದೆ.

ಇನ್ನು ಮುಂದಿನ ದಿನಗಳ ಬಗ್ಗೆಯೂ ಕೂಡ ಆಕೆ ಭವಿಷ್ಯವನ್ನು ನುಡಿದಿದ್ದು, 2025ರ ವೇಳೆಗೆ ಹಸಿವು ಸಂಪೂರ್ಣ ನಿರ್ಮೂಲನೆಯಾಗಲಿದೆ ಎಂದೂ ಹೇಳಿದ್ದಾರೆ. 51ನೇ ಶತಮಾನದ ವೇಳೆ ವಿಶ್ವವು ಸಂಪೂರ್ಣ ನಿರ್ಮೂಲನೆಯಾಗಲಿದೆ.

ವಿಶ್ವ ವಾಣಿಜ್ಯ ಕಟ್ಟಡದ ಮೇಲಿನ ದಾಳಿಯ ಬಗ್ಗೆ ಈಕೆ ಎಚ್ಚರಿಕೆ ನೀಡಿದ್ದರು. ಅದು ನಿಜವಾಗಿತ್ತು. ಇದೀಗ ಯುರೂಪ್’ನಲ್ಲಿ ಐಸಿಸ್ ತನ್ನ ಪ್ರಾಭಲ್ಯವನ್ನು ಹರಡಲಿದ್ದು, ರೋಂ ಅನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಳ್ಳಲಿದೆ. 2066ರ ವೇಳೆಗೆ ಅಮೆರಿಕವನ್ನೂ ಕೂಡ ತನ್ನ ವಶಕ್ಕೆ ಪಡೆಯಲಿದೆ ಎಂದು ಹೇಳಿದ್ದಾರೆ.