ಕಾಬೂಲ್’ನಲ್ಲಿ ಆತ್ಮಾಹುತಿ ದಾಳಿ; 26 ಸಾವು

First Published 21, Mar 2018, 2:43 PM IST
Blast in Kabul Claims At Least 26 Lives
Highlights
  • ಕಾಬೂಲಿನ ಶಿಯಾ ಪೂಜಾಸ್ಥಳವೊಂದರ ಬಳಿ ನಡೆದ ಆತ್ಮಾಹುತಿ ಬಾಂಬ್ ದಾಳಿ
  • ಕಳೆದ ಜನವರಿಯಲ್ಲಿ ನಡೆದ ದಾಳಿಯಲ್ಲಿ ಸುಮಾರು 100 ಮಂದಿ ಸಾವನಪ್ಪಿದ್ದರು

ಕಾಬೂಲ್: ಕಾಬೂಲಿನ ಶಿಯಾ ಪೂಜಾಸ್ಥಳವೊಂದರ ಬಳಿ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ  ಸುಮಾರು 26 ಮಂದಿ ಸಾವನಪ್ಪಿದ್ದು, 18 ಮಂದಿ ಗಾಯಗೊಂಡಿದ್ದಾರೆ.

ಪರ್ಶಿಯನ್ ಹೊಸ ವರ್ಷಾರಂಭದ (ನೌರುಝ್) ಹಿನ್ನಲೆಯಲ್ಲಿ ಕಾರ್ತೆ ಏ ಸಾಖಿ ಎಂಬಲ್ಲಿ ಸಂಭ್ರಮಾಚರಣೆಗಾಗಿ ಜನರು ಸೇರಿದ್ದರು. ಆ ವೇಳೆ ನಡೆದ ಆತ್ಮಾಹುತಿ ಬಾಂಬರ್ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಜನವರಿಯಲ್ಲಿ ನಡೆದ ದಾಳಿಯಲ್ಲಿ ಸುಮಾರು 100 ಮಂದಿ ಸಾವನಪ್ಪಿದ್ದರು. ಆ ಬಳಿಕ ಭದ್ರತೆಯನ್ನು ಹೆಚ್ಚಿಸುವುದಾಗಿ ಸರ್ಕಾರವು ಹೇಳಿಕೊಂಡಿತ್ತು. ಅದಾಗ್ಯೂ ಈ ದಾಳಿ ನಡೆದಿದೆಯೆನ್ನಲಾಗಿದೆ.

ಅಫಘಾನಿಸ್ತಾನದಲ್ಲಿ ಶಿಯಾ ಪಂಗಡದವರು ಪರ್ಶಿಯನ್ ಹೊಸವರ್ಷಾಚರಣೆ ನೌರುಝ್’ನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.     

loader