ದುರ್ಘಟನೆ ಸಂಭವಿಸಿದಾಗ 200 ಕಾರ್ಮಿಕರು ಫ್ಯಾಕ್ಟರಿಯಲ್ಲಿದ್ದರೆನ್ನಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ಇದೆ.

ತಿರುಚ್ಚಿ(ಡಿ. 01): ಸ್ಫೋಟಕ ಸಾಮಗ್ರಿ ತಯಾರಿಸುವ ಫ್ಯಾಕ್ಟರಿಯೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು 20ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಬೆಳಗ್ಗೆ 7ಗಂಟೆಗೆ ಸಂಭವಿಸಿದ ಈ ಅವಘಡದಲ್ಲಿ ಇನ್ನೂ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ವೆಟ್ರಿವೇಲ್ ಎಕ್ಸ್'ಪ್ಲೋಸಿವ್ ಕಟ್ಟಡದ ಕೆಳ ಮತ್ತು ಮೊದಲ ಮಹಡಿಗಳು ಕುಸಿದಿವೆ. ಇನ್ನೂ ಕೂಡ ಬೆಂಕಿ ನಂದಿಸುವ ಪ್ರಯತ್ನ ಮುಂದುವರಿದಿದೆ.

ವೆಟ್ರಿವೇಲ್ ಎಕ್ಸ್'ಪ್ಲೋಸಿವ್ಸ್ 5 ಎಕರೆ ವಿಶಾಲ ಪ್ರದೇಶದಲ್ಲಿರುವ ದೊಡ್ಡ ಕಾರ್ಖಾನೆಯಾಗಿದ್ದು, 15 ಉಪ-ಘಟಕಗಳು ಇದರಲ್ಲಿವೆ. ಈ ಫ್ಯಾಕ್ಟರಿಯಲ್ಲಿ ಬಂಡೆಯನ್ನು ಸ್ಫೋಟಿಸಲು ಬಳಸುವ ಜಿಲೆಟಿನ್ ಕಡ್ಡಿಗಳನ್ನು ತಯಾರಿಸಲಾಗುತ್ತಿತ್ತು.

ದುರ್ಘಟನೆ ಸಂಭವಿಸಿದಾಗ 200 ಕಾರ್ಮಿಕರು ಫ್ಯಾಕ್ಟರಿಯಲ್ಲಿದ್ದರೆನ್ನಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ಇದೆ.