ಸರ್ಕಾರ ಬಿಸಿಯೂಟಕ್ಕೆ ಐಯೋಡೈಸ್ಡ್ ಉಪ್ಪು ಎಂದು ಇದನ್ನೆ ಬಳಸಿ ಎಂದು ಕೊಡುತ್ತಿದೆ. ಇದನ್ನು ಕರ್ನಾಟಕ ಆಹಾರ ನಿಗಮದಿಂದ ಪೂರೈಸಲಾಗುತ್ತಿದೆ. ಕಳೆದ 6 ತಿಂಗಳಿನಿಂದ ಈ ಉಪ್ಪನ್ನು ನೀಡಲಾಗುತ್ತಿದೆ.

ಚಿತ್ರದುರ್ಗ (ನ.29): ರಾಜ್ಯದ ಬಹುತೇಕ ಕಡೆಗಳಲ್ಲಿ ನೀಲಿ ಉಪ್ಪಿನ ಆತಂಕವಾದರೆ, ಚಿತ್ರದುರ್ಗದಲ್ಲಿ ಬಿಳಿ ಉಪ್ಪು ಕಪ್ಪು ಬಣ್ಣಕ್ಕೆ ತಿರುಗಿದೆ.

ಸರ್ಕಾರ ಬಿಸಿಯೂಟಕ್ಕೆ ಸರ್ಕಾರಿ ಶಾಲೆಗಳಿಗೆ ನೀಡುತ್ತಿದ್ದ ಉಪ್ಪು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ನೋಡೋಕೆ ಉಪ್ಪು ಚೆನ್ನಾಗಿಯೇ ಕಾಣುತ್ತೆ. ಬಿಳಿ ಬಣ್ಣವನ್ನೇ ಹೊಂದಿರುತ್ತೆ. ಆದರೆ, ಅನ್ನಕ್ಕೆ ಹಾಕಿದಾಗ ಉಪ್ಪು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. 

ಸರ್ಕಾರ ಬಿಸಿಯೂಟಕ್ಕೆ ಐಯೋಡೈಸ್ಡ್ ಉಪ್ಪು ಎಂದು ಇದನ್ನೆ ಬಳಸಿ ಎಂದು ಕೊಡುತ್ತಿದೆ. ಇದನ್ನು ಕರ್ನಾಟಕ ಆಹಾರ ನಿಗಮದಿಂದ ಪೂರೈಸಲಾಗುತ್ತಿದೆ. ಕಳೆದ 6 ತಿಂಗಳಿನಿಂದ ಈ ಉಪ್ಪನ್ನು ನೀಡಲಾಗುತ್ತಿದೆ.

ಬಿಸಿಯೂಟ ತಯಾರಕರು ಶಾಲೆಗಳಲ್ಲಿ ಬಿಸಿಯೂಟದ ಅಡುಗೆಗೆ ಇದನ್ನೆ ಬಳಸುತ್ತಿದ್ದಾರೆ. ಇನ್ನೂ ಸುಮಾರು 4 ತಿಂಗಳಿಗೆ ಆಗುವಷ್ಟು ಉಪ್ಪನ್ನು ಶಾಲೆಗಳಿಗೆ ಪೂರೈಸಲಾಗಿದಿಯಂತೆ.