ನೋಟಿನ ಅಪಮೌಲ್ಯೀಕರಣ ಬಗ್ಗೆ ಪ್ರಧಾನಿ ಮೋದಿ ಮುಂಚಿತವಾಗಿ ತಿಳಿಸಿರುತ್ತಿದ್ದರೆ, ಕಾಳಧನಿಕರು ನಿಷೇಧ ಜಾರಿಯಾಗುವ ಮುನ್ನವೇ ಪೂರ್ವಸಿದ್ಧತೆ ಮಾಡಿಕೊಳ್ಳುವ ಸಾಧ್ಯತೆಗಳಿತ್ತು, ಎಂದು ಸಚಿವರು ಹೇಳಿದ್ದಾರೆ.
ನವದೆಹಲಿ (ನ.24): ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಹಣಕಾಸು ಇಲಾಖೆ ರಾಜ್ಯ ಸಚಿವ ಅರ್ಜುನ್ ರಾಮ್ ಮೆಘಲಾಲ್ ಸಮರ್ಥಿಸಿಕೊಂಡಿದ್ದಾರೆ.
ಕಾಳಧನಹೊಂದಿದವರಿಗೆ ಸಿದ್ಧತೆ ಮಾಡಿಕೊಳ್ಳಲು ಸಮಯ ಸಿಗಬಾರದೆಂದೇ, ನೋಟು ನಿಷೇಧದ ಬಗ್ಗೆ ಸರ್ಕಾರ ಮುಂಚಿತವಾಗಿ ತಿಳಿಸಲಿಲ್ಲ ಎಂದು ಮೆಘವಾಲ್ ಹೇಳಿದ್ದಾರೆ.
ನೋಟಿನ ಅಪಮೌಲ್ಯೀಕರಣ ಬಗ್ಗೆ ಪ್ರಧಾನಿ ಮೋದಿ ಮುಂಚಿತವಾಗಿ ತಿಳಿಸಿರುತ್ತಿದ್ದರೆ, ಕಾಳಧನಿಕರು ನಿಷೇಧ ಜಾರಿಯಾಗುವ ಮುನ್ನವೇ ಪೂರ್ವಸಿದ್ಧತೆ ಮಾಡಿಕೊಳ್ಳುವ ಸಾಧ್ಯತೆಗಳಿತ್ತು, ಎಂದು ಅವರು ಹೇಳಿದ್ದಾರೆ.
ಪ್ರಧಾನಿಯವರು ಬೆಳಗ್ಗೆ ವಿಪಕ್ಷಗಳ ಬಗ್ಗೆ ನೀಡಿ ಹೇಳಿಕೆಯನ್ನು ಸಮರ್ಥಿಸಿದ ಮೆಘವಾಲ್, ಮೋದಿಯವರು ಕಾಳಧನಿಕರ ಬಗ್ಗೆ ಹೇಳಿಕೆ ನೀಡಿದ್ದಾರೆಯೇ ಹೊರತು ವಿಪಕ್ಷಗಳಬಗ್ಗೆ ಅಲ್ಲವೆಂದು ಅವರು ಹೇಳಿದ್ದಾರೆ.
