ಡಿ.7ರಂದು ಹವೇಲಿಯನ್ ಬಳಿ ವಿಮಾನ ಪತನದಲ್ಲಿ 47 ಮಂದಿ ಮೃತರಾದ ಬಳಿಕ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನಗಳು ಹಾರಾಟ ನಡೆಸಿರಲಿಲ್ಲ.

ಇಸ್ಲಾಮಾಬಾದ್(ಡಿ.19): ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಎಟಿಆರ್-42 ವಿಮಾನ ಹಾರಾಟಕ್ಕೆ ಮುನ್ನ ಪಾಕಿಸ್ತಾನ ರಾಷ್ಟ್ರೀಯ ನೌಕೆಯ ಸಿಬ್ಬಂದಿ ಕಪ್ಪು ಬಣ್ಣದ ಮೇಕೆಯನ್ನು ಬಲಿಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫ್ರಾನ್ಸ್ ನಿರ್ಮಿತ ಟರ್ಬೊಪ್ರಾಪ್ ವಿಮಾನ ಪತನಗೊಂಡ ಪರಿಣಾಮ 47 ಮಂದಿ ಸಾವಿಗೀಡಾಗಿದ್ದು, ಇಂಥ ಘಟನೆಗಳು ಮರುಕಳಿಸಬಾರದು ಎಂಬ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಎಟಿಆರ್ ವಿಮಾನ ಕಾರ್ಯಾಚರಿಸುವ ಹಿನ್ನೆಲೆಯಲ್ಲಿ ಕೃತಜ್ಞತಾಪೂರಕವಾಗಿ ಮೇಕೆ ಬಲಿ ಕೊಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಡಿ.7ರಂದು ಹವೇಲಿಯನ್ ಬಳಿ ವಿಮಾನ ಪತನದಲ್ಲಿ 47 ಮಂದಿ ಮೃತರಾದ ಬಳಿಕ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನಗಳು ಹಾರಾಟ ನಡೆಸಿರಲಿಲ್ಲ.

ಈ ಕುರಿತು ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿ ಮಾಡಿದ ವರದಿ ನಿಮಗಾಗಿ...