ಊರಿನ ಜನರ ಬೆಂಬಿದ್ದಿರುವ ಕರಿನಾಗರಹಾವು.ಇದುವರೆಗೆ 52 ಜನರನ್ನ ಕಚ್ಚಿರುವ ೀ ಕರಿನಾಗರ, ಮೂವರನ್ನ ಬಲಿ ಪಡೆದಿದೆ.

ಲಖನೌ(ಅ.13): ಉತ್ತರಪ್ರದೇಶದ ರಾಂಪುರದ ಜಿಲ್ಲೆಯ ಪರಮ್ ಜಿಲ್ಲೆಯ ಜನ ಒಂದು ರೀತಿಯ ಭಯಗ್ರಸ್ಥ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ. ಇದಕ್ಕೆ ಕಾರಣ, ಊರಿನ ಜನರ ಬೆಂಬಿದ್ದಿರುವ ಕರಿನಾಗರಹಾವು.ಇದುವರೆಗೆ 52 ಜನರನ್ನ ಕಚ್ಚಿರುವ ೀ ಕರಿನಾಗರ, ಮೂವರನ್ನ ಬಲಿ ಪಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೃತ ವ್ಯಕ್ತಿಯ ಪತ್ನಿಯೊಬ್ಬರು ಹೇಳುವ ಪ್ರಕಾರ, ಈಕೆಯ ಪತ್ನಿಯ ಹೊಲಕ್ಕೆ ನೀರು ಹರಿಸಲು ತೆರಳಿದ್ದ ಸಂದರ್ಭ ಕರಿನಾಗರ ಕಚ್ಚಿದೆ. ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ಧಾನೆ. ಊರಿನ ಮಕ್ಕಳು ಸಹ ಹಾವಿನ ಭಯದಿಂದ ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದಾರಂತೆ.

ಊರಿನ ಜನರನ್ನ ಿನ್ನಿಲ್ಲದಂತೆ ಕಾಡುತ್ತಿರುವ ಹಾವನ್ನ ಹಿಡಿಯಲು ಉರಗತಜ್ಞರನ್ನ ಕರೆತರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ಧಾರೆ.