ಮಂಡ್ಯ [ಜೂ.13] : ಸಂಸದೆ ಸುಮಲತಾ ಅಂಬರೀಶ್ ಮಂಡ್ಯಕ್ಕೆ ಭೇಟಿ ನೀಡಿದ್ದು ಈ ವೇಳೆ ಇಲ್ಲಿನ ಬಿಜೆಪಿ ಹಾಗೂ ರೈತ ಸಂಘದ  ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದ್ದಾರೆ. 

ಶಿವಕುಮಾರ ಸ್ವಾಮೀಜಿ ಮಹಾದ್ವಾರ ಉದ್ಘಾಟನೆಗಾಗಿ ಸಂಸದೆಯಾದ ಬಳಿಕ ಮೊಟ್ಟ ಮೊದಲ ಬಾರಿಗೆ ಮಂಡ್ಯ ತಾಲೂಕಿನ ಮಾಚೇನಹಳ್ಳಿಗೆ ಆಗಮಿಸುತ್ತಿದ್ದಂತೆ ಜೈಕಾರ ಹಾಕಿ. ಹಾರ ತುರಾಯಿ ಹಾಕಿ ಸ್ವಾಗತಿಸಿದರು. 

ಇನ್ನು ಬಿ.ಎಸ್.ಯಡಿಯೂರಪ್ಪ, ನರೇಂದ್ರ ಮೋದಿ ಜೊತೆಗೆ ಸುಮಲತಾ ಅಂಬರೀಶ್ ಅವರ ಫೋಟೊ ಹಾಕಿರುವ ಫ್ಲೆಕ್ಸ್ ಗಳನ್ನು ಎಲ್ಲೆಡೆ ಹಾಕಿದ್ದು, ಬಿಜೆಪಿ ನಾಯಕರು ಹಳ್ಳಿಗೆ ಅವರನ್ನು ಬರಮಾಡಿಕೊಂಡರು.

ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಕೂಡ ಸುಮಲತಾ ಅಂಬರೀಶ್ ಅವರಿಗೆ ಹಲವು ಬಿಜೆಪಿಗರು ಹಾಗೂ ಕಾಂಗ್ರೆಸ್ ನಾಯಕರು ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಿದ್ದರು. ಬಿಜೆಪಿ ನಾಯಕರು ನೇರವಾಗಿಯೇ ಸುಮಲತಾಗೆ ಸಹಕಾರ ನೀಡಿದ್ದರು.