ಬೆಂಗಳೂರು [ಸೆ.03]: ಅಕ್ರಮ ಹಣ ಸಂಗ್ರಹ ಪ್ರಕರಣದಲ್ಲಿ ಇಡಿ ವಶದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ತಂದೆಗೆ ಪೂಜೆ ಸಲ್ಲಿಸಲಾಗುತ್ತಿಲ್ಲ ಎಂದು ಕಣ್ಣೀರು ಹಾಕಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ವ್ಯಂಗ್ಯವಾಡಿದ್ದಾರೆ. 

ಜನಾರ್ದನ ರೆಡ್ಡಿಗೆ ಹೋಲಿಕೆ ಮಾಡಿ ಟಾಂಗ್ ನೀಡಿದ್ದಾರೆ. ನೀವು ಕಣ್ಣೀರು ಹಾಕಿರುವುದನ್ನು ನೋಡಿ ಅಯ್ಯೋ ಎನಿಸಿತು ಎಂದು ಜನಾರ್ದನ ರೆಡ್ಡಿ ಅಭಿಮಾನಿಗಳು ಅಪಹಾಸ್ಯ ಮಾಡಿದ್ದಾರೆ. 

ನಮ್ಮ ನಾಯಕ ಜನಾರ್ದನ ರೆಡ್ಡಿ ಒಂದು ದಿನವೂ ಕಣ್ಣಿರು ಹಾಕಿರಲಿಲ್ಲ.  ರೆಡ್ಡಿ ಅವರನ್ನು ಕಾಂಗ್ರೆಸ್ ನವರು ಜೈಲಿಗೆ  ಕಳಿಸಿದ್ದರು. ಆದರೆ ಅವರು ಒಂದು ದಿನವೂ ಕಣ್ಣೀರು ಹಾಕದೇ ವಿಚಾರಣೆಗೆ ಸಹಕರಿಸಿದ್ದರು. ಕೋರ್ಟ್ ಮೂಲಕ ನ್ಯಾಯಾಂಗ ವ್ಯವಸ್ಥೆಗೆ ಗೌರವ ನೀಡಿದ್ದರು ಎಂದು ಟಾಂಗ್ ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರೆಡ್ಡಿ ಅವರನ್ನು ಮೂರುವರೆ ವರ್ಷಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು, ಇಷ್ಟಾದರೂ ಅವರು ಎಂದಿಗೂ ಕಣ್ಣೀರು ಸುರಿಸಿಲ್ಲ ಎಂದು ಬಿಜೆಪಿಗರು ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆಶಿ ಅವರಿಗೆ ಟಾಂಗ್ ನೀಡಿದ್ದಾರೆ.