ಬಳ್ಳಾರಿ [ಜು.26]: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸಿದ್ಧವಾಗಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಬಿಜೆಪಿ ನಾಯಕರಲ್ಲಿ ಉತ್ಸಾಹ ಗರಿಗೆದರಿದೆ.

14 ತಿಂಗಳ ಆಡಳಿತ ಭ್ರಷ್ಟ ಸರ್ಕಾರ ಆಡಳಿತ ಕೊನೆಯಾಗಿದೆ. ನಮಗೆ ಬಹುಮತ ಸಿಕ್ಕಿದ್ದು, ನಾವು ಗೆದ್ದಿದ್ದೇವೆ. ಜನರ ನಿರೀಕ್ಷೆಗೆ ತಕ್ಕಂತೆ ಸ್ವಚ್ಛ ಹಾಗೂ ಪ್ರಾಮಾಣಿಕವಾದ ಆಡಳಿತ ನೀಡುತ್ತೇವೆ ಎಂದು ಬಳ್ಳಾರಿಯಲ್ಲಿ ಬಿಜೆಪಿ ನಾಯಕ ಶ್ರೀ ರಾಮುಲು ಹೇಳಿದರು.

40 ವರ್ಷಗಳ ಕಾಲ ರಾಜ್ಯಕ್ಕೆ ಯಡಿಯೂರಪ್ಪ ದುಡಿದಿದ್ದಾರೆ. ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡಲಿ ಎಂದು ಹಾರೈಸುವೆ ಎಂದು ಶ್ರೀ ರಾಮುಲು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ್ತೆ ಸರ್ಕಾರ ರಚನೆಯ ಅವಕಾಶ?

ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭ ಬೇರೆ, ಬೇರೆ ಕಾರಣಗಳಿಂದ ತಡವಾಗಿದೆ. ಆದರೆ ಇಂದು ಕಾರ್ಯಕ್ರಮ ನಡೆಯಲಿದೆ ಎಂದರು. 

ಡಿಸಿಎಂ ಹುದ್ದೆ : ಉಪ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಬಳ್ಳಾರಿ ಶಾಸಕ ಶ್ರೀರಾಮುಲು ಪ್ರಸ್ತಾಪಿಸಿದ್ದು, ಉಪ ಮುಖ್ಯಮಂತ್ರಿ ಜನರು ನನ್ನನ್ನು ಗುರುತಿಸಿದ್ದಾರೆ ಎಂದರು. ಆದರೆ ನಾನೆಂದಿಗೂ ಕೂಡ ಸ್ಥಾನ ಮಾನಕ್ಕಾಗಿ ದುಡಿಯುವ ವ್ಯಕ್ತಿಯಲ್ಲ. ಪಕ್ಷಕ್ಕಾಗಿ ದುಡಿಯುವವನು. ಪಕ್ಷದ ನಿರ್ಣಯಕ್ಕೆ ಬದ್ಧನಾಗಿರುತ್ತೇವೆ ಎಂದಿದ್ದು, ಸಂಪುಟದಲ್ಲಿ ಯಾರಿಗೆ ಉಪ ಮುಖ್ಯಮಂತ್ರಿ ಪಟ್ಟ ಸಿಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.