ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಮೀಕ್ಷೆಯೊಂದು ನಡೆದಿದೆ. ಇದರ ಅನುಸಾರ ಕಾಂಗ್ರೆಸ್ ಒಂದು ವೇಳೆ 2019ರ ಚುನಾವಣೆಯಲ್ಲಿ ಒಂದು ನಿರ್ಧಾರ ತೆಗೆದುಕೊಂಡರೆ ಬಿಜೆಪಿಗೆ ಹೊಡೆತ ತಪ್ಪಿದ್ದಲ್ಲ ಎನ್ನಲಾಗಿದೆ. ಅಷ್ಟಕ್ಕೂ ಆ ಹೆಜ್ಜೆ ಯಾವುದು? ಇಲ್ಲಿದೆ ವಿವರ
ನವದೆಹಲಿ[ಜ.24]: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ವಾದ್ರಾ ನೇಮಕವಾದ ದಿನವೇ, ತಕ್ಷಣಕ್ಕೆ ಉತ್ತರಪ್ರದೇಶದಲ್ಲಿ ಲೋಕಸಭಾ ಚುನಾವಣೆ ನಡೆದರೆ ಏನಾಗಬಹುದು ಎಂದು ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಇಂಡಿಯಾ ಟುಡೇ ಮತ್ತು ಕಾರ್ವಿ ಈ ಸಮೀಕ್ಷೆ ನಡೆಸಿವೆ.
ಸಮೀಕ್ಷೆ ಅನ್ವಯ, ತಕ್ಷಣಕ್ಕೆ ಚುನಾವಣೆ ನಡೆದರೆ ಬಿಎಸ್‌ಪಿ- ಎಸ್‌ಪಿ ಮೈತ್ರಿಕೂಟ 58 ಸ್ಥಾನ ಗೆಲ್ಲಲಿದೆ. ಇನ್ನು ಕಳೆದ ಬಾರಿ 73 ಸೀಟು ಗೆದ್ದಿದ್ದ ಎನ್‌ಡಿಎ ಮೈತ್ರಿಕೂಟ 18 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರಲಿದೆ. ಒಂದು ವೇಳೆ ಎಸ್‌ಪಿ- ಬಿಎಸ್‌ಪಿ- ಕಾಂಗ್ರೆಸ್- ಆರ್‌ಎಲ್‌ಡಿ ಮತ್ತು ಇತರೆ ಪಕ್ಷಗಳು ಒಂದಾಗಿ ಚುನಾವಣೆಗೆ ಸ್ಪರ್ಧಿಸಿದ್ದೇ ಆದಲ್ಲಿ ಅವರು ಭರ್ಜರಿ 75 ಸೀಟು ಗೆಲ್ಲಲಿವೆ. ಎನ್‌ಡಿಎ ಬಲ 73ರಿಂದ ಕೇವಲ 5ಕ್ಕೆ ಇಳಿಯಲಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 24, 2019, 9:24 AM IST