Asianet Suvarna News Asianet Suvarna News

ಮಹಾರಾಷ್ಟ್ರದ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವಿನ ಸಂಭ್ರಮ; ಕಾಂಗ್ರೆಸ್'ನ ಅನೇಕ ಭದ್ರಕೋಟೆಗಳು ಛಿದ್ರ

ಈ ಬಾರಿಯ ಚುನಾವಣೆಯು ಬಹುತೇಕ ಕೇಂದ್ರ ಸರಕಾರದ ನೋಟ್ ನಿಷೇಧದ ಕ್ರಮದ ಬಗೆಗಿನ ಜನಾಭಿಪ್ರಾಯದಂತಾಗಿದೆ. ಕಾಂಗ್ರೆಸ್, ಎನ್'ಸಿಪಿಯಷ್ಟೇ ಅಲ್ಲ, ಬಿಜೆಪಿಯೊಂದಿಗೆ ಆಡಳಿತ ಜೊತೆಗಾರ ಶಿವಸೇನೆ ಕೂಡ ಮೋದಿ ಕ್ರಮವನ್ನು ವಿರೋಧಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ದೊರೆತಿರುವ ಗೆಲುವು ಗಮನಾರ್ಹವೆನಿಸಿದೆ.

bjp victory in maharashtra municipal polls

ಮುಂಬೈ(ನ. 28): ಮಹಾರಾಷ್ಟ್ರದ ಪೌರ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಶಿವಸೇನೆ ಪಕ್ಷಗಳು ಭರ್ಜರಿ ಗೆಲುವು ಪಡೆದಿವೆ. 25 ಜಿಲ್ಲೆಗಳಲ್ಲಿ 147 ಪುರಸಭೆ ಹಾಗೂ 17 ನಗರ ಪಂಚಾಯತ್'ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಒಟ್ಟು 3,705 ಸ್ಥಾನಗಳ ಪೈಕಿ 2501 ಕ್ಷೇತ್ರಗಳಲ್ಲಿ ಫಲಿತಾಂಶ ಹೊರಬಂದಿದ್ದು ಬಿಜೆಪಿ ಮತ್ತು ಶಿವಸೇನೆ ಪಕ್ಷಗಳು ಸಾವಿರಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿವೆ. ಸುಮಾರು 900 ಸ್ಥಾನಗಳು ಕಾಂಗ್ರೆಸ್ ಮತ್ತು ಎನ್'ಸಿಪಿ ಪಾಲಾಗಿವೆ.

ಇನ್ನು, 147 ಪುರಸಭೆಗಳ ಪೈಕಿ 148 ಪುರಸಭೆ ಫಲಿತಾಂಶ ಬಂದಿದ್ದು ಬಿಜೆಪಿ ಅರ್ಧಶತಕದ ಗಡಿ ದಾಟಿದೆ. ಶಿವಸೇನೆ ಮತ್ತು ಕಾಂಗ್ರೆಸ್ ಸಮಾನ ಸ್ಥಾನ ಪಡೆದಿವೆ. ವಾರ್ಧಾ ಜಿಲ್ಲೆಯಲ್ಲಿ ಎಲ್ಲಾ 6 ಪುರಸಭಾಧ್ಯಕ್ಷ ಸ್ಥಾನಗಳು ಬಿಜೆಪಿ ಪಾಲಾಗಿದೆ. ಕಾಂಗ್ರೆಸ್'ನ ಭದ್ರಕೋಟೆ ಎನಿಸಿದ ಸೋಲಾಪುರದಲ್ಲೂ ಬಿಜೆಪಿ ಜಯಭೇರಿ ಭಾರಿಸಿದೆ. ಕಾಂಗ್ರೆಸ್ ಪಕ್ಷ ನಾಲ್ಕನೇ ಸ್ಥಾನಕ್ಕೆ ಕುಸಿಯುವ ದೌರ್ಭಾಗ್ಯ ಕಾಣುತ್ತಿದೆ.

ಇನ್ನು, ಈ ಬಾರಿಯ ಚುನಾವಣೆಯು ಬಹುತೇಕ ಕೇಂದ್ರ ಸರಕಾರದ ನೋಟ್ ನಿಷೇಧದ ಕ್ರಮದ ಬಗೆಗಿನ ಜನಾಭಿಪ್ರಾಯದಂತಾಗಿದೆ. ಕಾಂಗ್ರೆಸ್, ಎನ್'ಸಿಪಿಯಷ್ಟೇ ಅಲ್ಲ, ಬಿಜೆಪಿಯೊಂದಿಗೆ ಆಡಳಿತ ಜೊತೆಗಾರ ಶಿವಸೇನೆ ಕೂಡ ಮೋದಿ ಕ್ರಮವನ್ನು ವಿರೋಧಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ದೊರೆತಿರುವ ಗೆಲುವು ಗಮನಾರ್ಹವೆನಿಸಿದೆ.

ಮಹಾರಾಷ್ಟ್ರ ಪೌರ ಚುನಾವಣೆ ಫಲಿತಾಂಶ(ಸಂಜೆ 6ಗಂಟೆವರೆಗಿನ ವಿವರ):

ಒಟ್ಟು ಸ್ಥಾನಗಳು: 3,705
ಫಲಿತಾಂಶ ಪ್ರಕಟವಾಗಿದ್ದು: 2501
ಬಿಜೆಪಿ: 610
ಶಿವಸೇನೆ: 402
ಎನ್'ಸಿಪಿ: 482
ಕಾಂಗ್ರೆಸ್: 408
ಎಂಎನ್'ಎಸ್: 12
ಬಿಎಸ್'ಪಿ: 4
ಇತರರು: 583

ಒಟ್ಟು ಪುರಸಭಾ ಸ್ಥಾನಗಳು: 147
ಫಲಿತಾಂಶ ಪ್ರಕಟವಾಗಿದ್ದು: 142
ಬಿಜೆಪಿ: 50
ಶಿವಸೇನೆ: 25
ಕಾಂಗ್ರೆಸ್: 24
ಎನ್'ಸಿಪಿ: 14
ಇತರರು: 29

Follow Us:
Download App:
  • android
  • ios