ಕನ​ಕ​ಪುರ [ಜೂ.16] :  ಜೆಡಿ​ಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾ​ರ ಅಲು​ಗಾ​ಡಿ​ಸಲು ಎರಡೂ ಪಕ್ಷಗಳ ಶಾಸಕರಿಗೆ ಬಿಜೆ​ಪಿ​ಯ​ವರು ಚಾಕೋ​ಲೆಟ್‌ ಹಾಕು​ತ್ತಿ​ದ್ದಾರೆ. ಅವರ ಆಮಿಷಗಳಿಗೆ ನಮ್ಮ ಶಾಸಕರು ಕಪ್ಪೆಯಂತೆ ಆಡುತ್ತಿದ್ದಾರೆ. 

ಆದರೆ ನಾವು ಬಿಜೆಪಿಗೆ ಅಧಿಕಾರ ಸಿಗಲು ಬಿಡಲ್ಲ ಎಂದು ಜಲ​ಸಂಪ​ನ್ಮೂಲ ಸಚಿವ ಡಿ.ಕೆ.​ಶಿ​ವ​ಕು​ಮಾರ್‌ ಹೇಳಿದರು. ನಗರದ ಹೊರವಲಯದಲ್ಲಿ ಶನಿವಾರ ಕನಕಪುರ ವಿಧಾನಸಭಾ ಕ್ಷೇತ್ರದ ಮತದಾರರು, ಜೆಡಿಎಸ್‌-ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಕೃತಜ್ಞತಾ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದೊಂದು ವರ್ಷದಿಂದ ಚಾಕೊಲೆಟ್‌ ತೋರಿಸುತ್ತಿದ್ದವರು ಇಂದು ಗಾಂಧಿ ಪ್ರತಿಮೆ ಬಳಿ ಮಲಗಿದ್ದಾರೆ. ಅವರು ಅಲ್ಲೇ ಮಲಗಿರಲಿ. ಅವರಿಗೆ ಅಧಿಕಾರ ಬೇಕು. ಅದಕ್ಕಾಗಿ ಅಲ್ಲಿ ಮಲಗಿದ್ದಾರೆ. ಬಿಜೆ​ಪಿ​ಯ​ವರ ಆಮಿ​ಷ​ಗ​ಳಿಗೆ ನಮ್ಮ ಶಾಸ​ಕರು ಕಪ್ಪೆ​ಯಂತೆ ಆಡು​ತ್ತಿ​ದ್ದಾರೆ. 

ಅವ​ರನ್ನು ಹಿಡಿ​ದಿ​ಡಲು ನಾವು ಶ್ರಮ ಪಡು​ತ್ತಿ​ದ್ದೇವೆ. ಏನೇ ಆದರೂ ಸರಿ ಬಿಜೆಪಿಗೆ ಅಧಿ​ಕಾರ ಸಿಗು​ವು​ದಿಲ್ಲ. ಅದಕ್ಕೆ ನಾವು ಅವ​ಕಾ​ಶ​ ನೀಡು​ವುದೂ ಇಲ್ಲ ಎಂದರು.